ಕಲ್ಮಶರಹಿತನೇ
ಬ್ರಾಹ್ಮಣ
ಯಾರಲ್ಲಿ ರಾಗ, ದ್ವೇಷ, ಅಹಂಕಾರ ಮತ್ತು
ಅವಿಧೇಯತೆಗಳು
ಸೂಜಿಯ ತುದಿಯಲ್ಲಿನ ಸಾಸುವೆ
ಕಾಳಿನಂತೆ ಬಿದ್ದು ಹೋಗಿದೆಯೋ
ಅಂತಹವನನ್ನು ನಾನು ಬ್ರಾಹ್ಮಣ
ಎನ್ನುತ್ತೇನೆ. (407)
ಗಾಥ ಪ್ರಸಂಗ 26.24
ಈ ಘಟನೆಯು ವಿಸ್ತೃತ ವಿವರಣೆಯು ಈಗಾಗಲೇ ಎರಡನೇ ಅಧ್ಯಾಯದ 3ನೇ ಪ್ರಸಂಗದಲ್ಲಿ ಬಂದಿದೆ (ಗಾಥಾ 25).
ಚುಲ್ಲಪಂಥಕನು ಸಂಘಕ್ಕೆ ಸೇರಿದಾಗ, ಮಹಾಪಂಥಕ ಆಗಲೇ ಅರಹಂತನಾಗಿದ್ದನು. ಚುಲ್ಲಪಂಥಕನಿಗೆ ಒಂದೇ ಗಾಥೆಯನ್ನು ನೆನಪಿಡಲು ನಾಲ್ಕು
ತಿಂಗಳು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಏಕೆಂದರೆ ಅವನು ಹಿಂದಿನ ಜನ್ಮದಲ್ಲಿ ಶೀಲವಂತ ದಡ್ಡ
ಭಿಕ್ಷುವಿಗೆ ಪರಿಹಾಸ್ಯ ಮಾಡಿದ್ದನು. ಈಗ ಅವನನ್ನು ಸರಿದಾರಿಗೆ ತರಲು ಮಹಾಪಂಥಕನು ತನ್ನ ತಮ್ಮ
ಚುಲ್ಲಪಂಥಕನಿಗೆ ವಿಹಾರ ತೊರೆಯಲು ಹೇಳಿದನು.
ಈ ಸಂಬಂಧವಾಗಿ ಭಿಕ್ಷುಗಳು ಭಗವಾನರೊಂದಿಗೆ ಭಗವಾನ್, ಅರಹಂತರಿಗೆ ಕೋಪ ಬರುವುದೇ? ಏಕೆಂದರೆ ಮಹಾಪಂಥಕನು ತನ್ನ ತಮ್ಮನನ್ನು ಗಾಥೆ ನೆನಪಿಡದಿದ್ದುದಕ್ಕಾಗಿ ವಿಹಾರದಿಂದ
ಹೊರಹೋಗೆಂದು ಆಜ್ಞಾಪಿಸಿದ್ದಾರೆ.
ಆಗ ಭಗವಾನರು ಹೀಗೆಂದರು: ಭಿಕ್ಷುಗಳೇ, ಅರಹಂತರಲ್ಲಿ ಮಾನಸಿಕ ಕಲ್ಮಶಗಳಾದ ರಾಗ, ದ್ವೇಷ ಇತ್ಯಾದಿಗಳು
ಇರುವುದಿಲ್ಲ. ಅವರು ತಮ್ಮನನ್ನು ಸರಿಹಾದಿಗೆ ತರಲೆಂದು ಹೀಗೆ ವತರ್ಿಸಿದ್ದಾರೆಯೇ ಹೊರತು
ಕೋಪದಿಂದಲ್ಲ ಎಂದು ಹೇಳಿ ಈ ಮೇಲಿನ ಗಾಥೆ ನುಡಿದರು.
No comments:
Post a Comment