Thursday, 1 October 2015

dhammapada/brahmanavagga/26.4/whoisbrahmana

ಪರಿಶುದ್ಧನು ಮತ್ತು ಧ್ಯಾನಿಯೇ ಬ್ರಾಹ್ಮಣ
ಧ್ಯಾನಿಯು, ಕಲೆರಹಿತನು, ಏಕಾಂತದಲ್ಲಿ ಆಸೀನನಾಗಿರುವವನು,
ಮಾಡಬೇಕಾದ ಸರ್ವ ಕಾರ್ಯಗಳನ್ನು ಮಾಡಿರುವವನು,
ಆಸವರಹಿತನು, ಉತ್ತಮೋತ್ತಮವಾದ ಗುರಿಯನ್ನು ಸಾಧಿಸಿರುವವನು,
ಆದ ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.          (386)

ಗಾಥ ಪ್ರಸಂಗ 26.4
ಯಾರು ನಿಜವಾಗಿ ಬ್ರಾಹ್ಮಣ ?


                ಬ್ರಾಹ್ಮಣನೊಬ್ಬನು ಹೀಗೆ ತನ್ನಲ್ಲೇ ಯೋಚಿಸಿದನು: ಭಗವಾನರು ತಮ್ಮ ಶಿಷ್ಯರಿಗೆ ಆಗಾಗ್ಗೆ ಬ್ರಾಹ್ಮಣರೆಂದು ಸಂಬೋಧಿಸುತ್ತಾರೆ. ನಾನಂತು ಜನ್ಮದಿಂದಲೇ ಬ್ರಾಹ್ಮಣನಾಗಿರುವೆನು, ಆದ್ದರಿಂದ ಈ ಬ್ರಾಹ್ಮಣತ್ವದ ಹೆಸರು ನನಗೂ ಅನ್ವಯಿಸುವುದು. ಹೀಗಾಗಿ ಆತನು ಭಗವಾನರ ಹತ್ತಿರ ಬಂದು, ಈ ಬಗ್ಗೆ ವಿಚಾರಿಸಿದನು. ಆಗ ಭಗವಾನರು ಹೀಗೆ ಉತ್ತರಿಸಿದರು: ಕೇವಲ ಹುಟ್ಟಿನಿಂದಲೇ ಅಥವಾ ಜಾತಿ (ವರ್ಣ)ದಿಂದಲೇ ಬ್ರಾಹ್ಮಣನಾಗುವುದಿಲ್ಲ. ಯಾರು ಅತ್ಯುನ್ನತ ಸರಿಯಾದ ಅರಹತ್ವವನ್ನು ತಲುಪಿರುವವನೋ ಆತನಿಗೆ ಮಾತ್ರ ನಾನು ಬ್ರಾಹ್ಮಣ ಎನ್ನುತ್ತೇನೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment