ಪ್ರಶಾಂತ
ಚಾರಿತ್ರನೇ ಸಮಣ
ಪಾಪವನ್ನು
ಪರಿತ್ಯಜಿಸಿರುವುದರಿಂದಾಗಿ ಬ್ರಾಹ್ಮಣನೆಂದು,
ಪ್ರಶಾಂತತೆ ಉಂಟುಮಾಡುವ
ಚಾರಿತ್ರ್ಯದಿಂದಾಗಿ ಸಮಣನೆಂದು
ಕರೆಯುತ್ತಾನೆ. ತನ್ನ
ಕಲ್ಮಶಗಳೆಲ್ಲ ಬಿಟ್ಟಿರುವವನನ್ನು
ಪಬ್ಬಜಿತನೆಂದು ಕರೆಯುತ್ತೇನೆ. (388)
ಗಾಥ ಪ್ರಸಂಗ 26.6
ಪ್ರತಿಯೊಬ್ಬರು ಭಿಕ್ಷುಗಳಲ್ಲ, ಪಬ್ಬಜಿತರೂ ಅಲ್ಲ
ಒಮ್ಮೆ ಬ್ರಾಹ್ಮಣನೊಬ್ಬನು ಅನ್ಯ ಪಂಥದ ಪರ ಗುರುವಿನ ಬಳಿಯಲ್ಲಿ,
ಗೃಹತ್ಯಜಿಸಿ ಶಿಷ್ಯವೃತ್ತಿ ಪಾಲಿಸುತ್ತಿದ್ದನು. ಒಮ್ಮೆ ಆತನಿಗೆ ಈ
ಬಗೆಯ ಯೋಚನೆ ಬಂದಿತು: ಭಗವಾನರು ತಮ್ಮ ಶಿಷ್ಯರಿಗೆ ಪಬ್ಬಜಿತನೆಂದು ಕರೆಯುವರು, ನಾನು ಸಹಾ ಪಬ್ಬಜಿತನಾಗಿದ್ದೇನೆ, ಹೀಗಾಗಿ ಆ ಪಬ್ಬಜಿತನೆಂಬ ಹೆಸರು ನನಗೂ ಅನ್ವಯಿಸುವುದು.
ಹೀಗಾಗಿ ಆತನು ಭಗವಾನರೊಂದಿಗೆ ಇದೇ ಪ್ರಶ್ನೆಯನ್ನು ಹಾಕಿದನು. ಆಗ
ಭಗವಾನರು ಹೀಗೆ ನುಡಿದರು: ನಾನು ಎಲ್ಲರಿಗೂ ಪಬ್ಬಜಿತನೆಂದು ಹೇಳಲಾರೆ, ಯಾರಲ್ಲಿ ಚಿತ್ತ ಕಲ್ಮಶಗಳು ನಿಮರ್ೂಲವಾಗಿದೆಯೋ ಆತನೇ ಪಬ್ಬಜಿತನೆಂದು ಕರೆಯಲ್ಪಡುತ್ತಾನೆ
ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment