ಸಮಥ ಮತ್ತು ವಿಪಶ್ಶನಗಳಿಂದ ಬಂಧನಗಳೇ ಮಾಯ
ಯಾವಾಗ ಎರಡು ಧಮ್ಮಗಳಿಂದ
(ಸಮಥ ಮತ್ತು ವಿಪಸ್ಸನ)
ಬ್ರಾಹ್ಮಣನು ಆಚೆಗಿನ ದಡವನ್ನು
ತಲುಪುವನೋ ಆಗ ಅಂತಹ ಜ್ಞಾನಿಯ
ಸರ್ವ ಸಂಯೋಜನೆಗಳು
ಮಾಯವಾಗುವುದು. (384)
ಗಾಥ ಪ್ರಸಂಗ 26.2
30 ಭಿಕ್ಷುಗಳಿಗಾಗಿ
ಸಾರಿಪುತ್ರರ ಪ್ರಶ್ನೆ
ಒಮ್ಮೆ ಪರರಾಜ್ಯಗಳಿಂದ ಬಂದಂತಹ 30 ಭಿಕ್ಷುಗಳು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಆಗ ಸಾರಿಪುತ್ರರಿಗೆ ಆ ಭಿಕ್ಷುಗಳು
ಅರಹತ್ವ ಪ್ರಾಪ್ತಿಗೆ ಅತ್ಯಂತ ಪಕ್ವ ಸ್ಥಿತಿಯಲ್ಲಿರುವುದು ತಿಳಿಯಿತು. ಆಗ ಅವರು ಭಗವಾನರನ್ನು
ಸಮೀಪಿಸಿ, ಹೀಗೆ ಪ್ರಶ್ನಿಸಿದರು: ಯಾವ ಎರಡು ಧಮ್ಮಗಳು ಬಹಳಷ್ಟು
ವೇಳೆ ಸಾಧಕರಿಗೆ ಬೇಕಾಗಿರುವಂತಹುದು?
ಸಾರಿಪುತ್ತ, ಸಮಥ ಮತ್ತು ವಿಪಸ್ಸನದಂತಹ
ಎರಡು ಧಮ್ಮಗೇ ಪರಮಶಾಂತತೆಗೆ ಮತ್ತು ಪರಮಸತ್ಯದೆಡೆಗೆ ಸಾಗಲು ಜೀವನದಲ್ಲಿ
ಬೇಕಾಗಿರುವಂತಹದ್ದಾಗಿದೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment