Friday 4 September 2015

dhammapada/nagavagga/23.2/mahout

ದಮಿಸಲ್ಪಟ್ಟವರೇ ನಿಬ್ಬಾಣ ಸಾದಿಸುವರು
"ಇವುಗಳ ಮೇಲೆ ಹತ್ತಿ ಯಾನ ಮಾಡಿದರೂ ಸಹಾ
ಯಾರೂ ಹೋಗಿಲ್ಲದ ಸ್ಥಿತಿಯನ್ನು (ನಿಬ್ಬಾಣ) ತಲುಪಲಾಗುವುದಿಲ್ಲ,
ಯಾರು ಸ್ವಯಂನ್ನು ದಮಿಸಿರುವನೋ,
ಅಂತಹ ಚೆನ್ನಾಗಿ ದಮಿಸಲ್ಪಟ್ಟವನೇ ಆ ಸ್ಥಿತಿಯನ್ನು ತಲುಪಬಲ್ಲ."     (323)

ಗಾಥ ಪ್ರಸಂಗ 23:2
ಈ ಹಿಂದೆ ಮಾವುತನಾಗಿದ್ದ ಭಿಕ್ಷುವಿನ ನಿಬ್ಬಾಣಯಾನ


            ಶ್ರಾವಸ್ತಿಯ ಅಚಿರಾವತಿ ನದಿಯ ದಂಡೆಯ ಮೇಲೆ ಒಮ್ಮೆ ಕೆಲ ಭಿಕ್ಷುಗಳು ಮಾವುತನನ್ನು ನೋಡಿದರು. ಆ ಮಾವುತನು ಆ ಆನೆಯನ್ನು ಪಳಗಿಸಲು ಅತ್ಯಂತ ಪ್ರಯಾಸಪಡುತ್ತಿದ್ದನು. ಆ ಆನೆಯನ್ನು ಪಳಗಿಸಲು ಅತ್ಯಂತ ಕಷ್ಟಪಡುತ್ತಿದ್ದನು. ಅದನ್ನು ಗಮನಿಸುತ್ತಿದ್ದ ಭಿಕ್ಷುಗಳಲ್ಲಿ ಒಬ್ಬನು "ಈ ಆನೆಯನ್ನು ಪಳಗಿಸುವುದು ಅತಿ ಸುಲಭ" ಎಂದು ನುಡಿದು ಅದರ ಬಗ್ಗೆ ವಿವರಣೆ ನೀಡತೊಡಗಿದನು. ಅದನ್ನು ಆಲಿಸುತ್ತಲೇ ಆ ಮಾವುತನು ಅದರಂತೆಯೇ ನಡೆದುಕೊಂಡು ಆ ಆನೆಯನ್ನು ಕ್ಷಣಗಳಲ್ಲಿ ಪಳಗಿಸಿದನು. ನಂತರ ಆ ಭಿಕ್ಷುವಿಗೆ ಧನ್ಯವಾದ ಅಪರ್ಿಸಿದನು. ಭಿಕ್ಷುಗಳೆಲ್ಲಾ ವಿಹಾರಕ್ಕೆ ಹಿಂತಿರುಗಿದರು. ಆಗ ಕೆಲ ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಈ ಹಿಂದೆ ಮಾವುತನಾಗಿದ್ದಂತಹ ಭಿಕ್ಷುವಿಗೆ ಕರೆಸಿ ಹೀಗೆ ನುಡಿದರು: "ಓ ಭಿಕ್ಷುವೇ, ಯಾರು ಮಾರ್ಗ ಮತ್ತು ಫಲಗಳಿಂದ ಇನ್ನೂ ದೂರದಲ್ಲಿಯೇ ಇರುವನೋ ಆತನು ವ್ಯರ್ಥವಾಗಿದಾನೆ. ಓ ಭಿಕ್ಷುವೇ ಭಿಕ್ಷುವಾಗಿಯೂ ಇನ್ನೂ ಆನೆಗಳನ್ನು ಪಳಗಿಸುವುದರಲ್ಲಿ ಆನಂದಿಸಬೇಡ, ಮಾವುತತನದಿಂದಾಗಿ ಲೋಕೋತ್ತರ ಗಳಿಸಲಾಗುವುದಿಲ್ಲ. ಇಂತಹ  ಮಾವುತತನದ ಯಾನದಿಂದಲೇ ಯಾರು ತುಳಿಯದ, ತಲುಪದ ನೆಲೆಯನ್ನು (ನಿಬ್ಬಾಣ) ನೀನು ತಲುಪಲಾರೆ. ಯಾರು ತನ್ನನ್ನು ದಮಿಸಿದ್ದಾನೆಯೋ ಅಂತಹ ದಮಿಸಲ್ಪಟ್ಟವನು ಅಲ್ಲಿಗೆ ಹೋಗಬಲ್ಲನು" ಎಂದು ನುಡಿದು ಮೇಲಿನ ಗಾಥೆ ತಿಳಿಸಿದರು.

No comments:

Post a Comment