Monday 7 September 2015

dhammapada/tanhavagga/24.6/uggasena

ಮನಸ್ಸನ್ನು ಎಲ್ಲದರಿಂದ ವಿಮುಕ್ತಗೊಳಿಸು
"ಹಿಂದಿನದನ್ನು (ಭೂತಕಾಲವನ್ನು) ಬಿಟ್ಟುಬಿಡು,
ಮುಂದಿನದನ್ನು (ಭವಿಷ್ಯ ಕಾಲವನ್ನು) ಬಿಟ್ಟುಬಿಡು,
ಮಧ್ಯದಲ್ಲಿರುವುದನ್ನು (ವರ್ತಮಾನವನ್ನು) ಬಿಟ್ಟುಬಿಡು.
ಭವಕ್ಕೆ ಅತೀತವಾಗಿ ಹೋಗು, ಸರ್ವತ್ರವಾಗಿ
ಎಲ್ಲಾ ರೀತಿಯಿಂದಲೂ ಮನಸ್ಸನ್ನು ವಿಮುಕ್ತಗೊಳಿಸು.
ಆಗ ನಿನಗೆ ಜನ್ಮ ಜರಾಗಳು ಪುನಃ ಬರಲಾರವು."           (348)
ಗಾಥ ಪ್ರಸಂಗ 24:6
ದೊಂಬರಾಟದ ಪ್ರಾವಿಣ್ಯ ಉಗ್ಗಸೇನ ಸಂತನಾದುದು

            ಒಮ್ಮೆ ರಾಜಗೃಹದಲ್ಲಿ ಅಲೆಮಾರಿ ದೊಂಬರಾಟದವರ ಗುಂಪೊಂದು ಬಂದಿತು. ಅವರು ಸರ್ಕಸ್ ನಾಟಕ ಮತ್ತು ಜಿಮ್ನಾಸ್ಟಿಕ್ನ ತಂತ್ರಗಳನ್ನು ಮಿಶ್ರಣವಾಗಿಸಿಕೊಂಡಿದ್ದರು. ಅವರ ಗುಂಪಿನಲ್ಲಿ 500 ಜನ ನೃತ್ಯಗಾರರು ಮತ್ತು ದೊಂಬರಾಟದವರು ಇದ್ದರು. ಅವರು ಬಿಂಬಸಾರನ ಅರಮನೆಯಲ್ಲಿಯೇ ಏಳು ದಿನಗಳ ಕಾಲ ತಮ್ಮ ಕೌಶಲ್ಯವನ್ನು ಪ್ರದಶರ್ಿಸಿದರು. ದೊಂಬರಾಟದವರ ನಾಯಕನಿಗೆ ಮಗಳೊಬ್ಬಳಿದ್ದಳು. ಆಕೆಯು ಉದ್ದದ ಕಂಬದ ಮೇಲೆಯೇ ನೃತ್ಯ ಹಾಗು ಗಾಯನ ಮಾಡುತ್ತಿದ್ದಳು. ಅದರ ಮೇಲೆಯೇ ಆಕೆಯು ಲಾಗಗಳನ್ನು ಪಲ್ಟಿಗಳನ್ನು ಹೊಡೆಯುತ್ತಿದ್ದಳು. ಆಕೆಯ ಪ್ರದರ್ಶನವೊಂದನ್ನು ವೀಕ್ಷಿಸಿದ ಶ್ರೀಮಂತ ಯುವಕ ಉಗ್ರಸೇನನು ಆಕೆಯಲ್ಲಿ ಅನುರಕ್ತನಾದನು. ಆತನ ತಂದೆ-ತಾಯಿಗಳ ವಿರೋಧದ ನಡುವೆಯು ಆಕೆಯನ್ನು ಆತನು ವಿವಾಹವಾದನು. ಆಕೆಗಾಗಿ ತನ್ನ ಕುಟುಂಬ, ಐಶ್ವರ್ಯಗಳೆಲ್ಲಾ ಬಿಟ್ಟು, ಅವರ ಗುಂಪು ಎಲ್ಲೆಲ್ಲಿ ಹೋಗುತ್ತಿತ್ತೋ ಅಲ್ಲೆಲ್ಲಾ ಹೋಗುತ್ತಿದ್ದನು. ಆದರೆ ಆತನಿಗೆ ನೃತ್ಯವಾಗಲಿ, ದೊಂಬರ ವಿದ್ಯೆಯಾಗಲಿ ತಿಳಿದಿರಲಿಲ್ಲ. ಹೀಗಾಗಿ ಆತನು ಕೂಲಿಯವನಂತೆ ಸರಕುಗಳನ್ನು ಎತ್ತುತ್ತಾ, ಹೊರುತ್ತಾ, ಅವರ ಹಿಂದೆಯೇ ಸಾಗುತ್ತಿದ್ದನು.
            ಕಾಲನಂತರ ಉಗ್ರಸೇನ ಹಾಗು ಆತನ ಪತ್ನಿಗೆ ಮಗುವಾಯಿತು. ಆ ಮಗುವನ್ನು ಆಡಿಸುತ್ತಾ ಆತನ ಪತ್ನಿಯು ಹೀಗೆ ಹಾಡುತ್ತಿದ್ದಳು: "ಓ ಬಂಡಿಗಳ ಕಾವಲುಗಾರನ ಮಗನೇ, ಓ ಸರಕುಸಾಗಣೆ ಮಾಡುವವನ ಮಗನೇ, ಓ ಏನೊಂದು ಅರಿಯದ, ಏನೊಂದು ಮಾಡದವನ ಮಗನೇ, ಓ ಏನೊಂದು ಅರಿಯದ, ಏನೊಂದು ಮಾಡದವನ ಮಗನೇ..." ಎಂದು ಹಾಡುತ್ತಿದ್ದ ಪತ್ನಿಯ ಹಾಡನ್ನು ಉಗ್ರಸೇನನು ಕೇಳಿದನು.
            ಈ ಹಾಡಿನಿಂದ ಆತನ ಮನಸ್ಸಿಗೆ ಅತೀವ ನೋವಾಯಿತು, ಆತನ ಪತ್ನಿಯಲ್ಲಿಗೆ ಹೋಗಿ ಹೀಗೆ ಕೇಳಿದನು: "ಈ ಹಾಡನ್ನು ನನ್ನ ಕುರಿತಾಗಿ ಹಾಡುತ್ತಿರುವೆಯಾ?" "ಹೌದು." "ಹಾಗಿದ್ದರೆ ನಾನು ನಿನ್ನನ್ನು ಬಿಟ್ಟು ಹೋಗಿಬಿಡುತ್ತೇನೆ."
            "ನೀನು ಇದ್ದರೂ ಅಥವಾ ಇಲ್ಲದೆ ಇದ್ದರೂ ವ್ಯತ್ಯಾಸವೇನಿದೆ?" ಎನ್ನುತ್ತಾ ಪುನಃ ಅದೇ ಹಾಡನ್ನು ಮುಂದುವರೆಸಿದಳು. ಉಗ್ರಸೇನನ ಪ್ರತಿಷ್ಠೆಗೆ ಮಹಾ ಪೆಟ್ಟು ಬಿದ್ದಿತ್ತು. ಆಕೆಗಾಗಿ ಆತನು ಎಲ್ಲವನ್ನೂ ತ್ಯಜಿಸಿ ಬಂದಿದ್ದನು. ಆತನ ಪ್ರೇಮಕ್ಕೆ ಮೌಲ್ಯವಿಲ್ಲದಂತಾಯಿತು. ಆಕೆಗೆ ಪಾಠ ಕಲಿಸಬೇಕೆಂದು ಆತನು ನಿರ್ಧರಿಸಿದನು. ಹೀಗಾಗಿ ಆತನು ಮಾವನ ಬಳಿ ಹೋಗಿ ತನಗೂ ದೊಂಬರವಿದ್ಯೆ ಕಲಿಸಲು ಕೇಳಿಕೊಂಡನು. ಮಾವನು ಕಲಿಸಲು ಸಿದ್ಧನಾದನು. ಕೇವಲ ವರ್ಷವೊಂದರಲ್ಲೇ ಆ ಇಡೀ ದೊಂಬರ ವಿದ್ಯೆಯಲ್ಲಿ ಪ್ರವೀಣನಾದನು.
            ಈ ಬಾರಿ ಆ ದೊಂಬರ ಸಂಘ ಪುನಹ ರಾಜಗೃಹಕ್ಕೆ ಬಂದಿತು. ಆಗ ಅದರಲ್ಲಿ ಉಗ್ರಸೇನನು ಸಹಾ ತನ್ನ ಕಲೆಯ ಪ್ರದರ್ಶನ ಮಾಡುವೆನೆಂದು ಪ್ರಚಾರ ಮಾಡಿದನು. ಈ ಪ್ರದರ್ಶನವು ಏಳು ದಿನ ಮಾತ್ರ ಎಂದು ಘೋಷಿಸಲಾಯಿತು. ಏಳನೆಯ ದಿನದಂದು ಉಗ್ರಸೇನನು ಅತ್ಯಂತ ಎತ್ತರವಾದ ಕಂಬದ ಮೇಲೆ ನಿಂತನು. ಆತ ಇನ್ನೇನು ಅದರ ಮೇಲೆ ಏಳುಬಾರಿ ಪಲ್ಟಿ ಹೊಡದು, ಹಾಗೆಯೇ ನಿಲ್ಲಬೇಕಿತ್ತು. ಅದರಲ್ಲಿ ಆತನು ಸಿದ್ಧಹಸ್ತನನ್ನಾಗಿಸಿಕೊಂಡಿದ್ದನು. ಅದೇ ಸಮಯದಲ್ಲಿ ಭಗವಾನರು ರಾಜಗೃಹವನ್ನು ಪ್ರವೇಶಿಸಿದರು. ಉಗ್ರಸೇನನಿಗೆ ಜ್ಞಾನೋದಯದ ಕಾಲ ಕೂಡಿಬಂದಿದೆ ಎಂದು ಅವರಿಗೆ ತಿಳಿಯಿತು. ಹೀಗಾಗಿ ಅವರು ಪ್ರೇಕ್ಷಕರೆಲ್ಲೂ ಉಗ್ರಸೇನನನ್ನು ಬಿಟ್ಟು ತಮ್ಮಲ್ಲಿಗೆ ಆಕಷರ್ಿತರಾಗಿ ಬರುವಂತೆ ಸಂಕಲ್ಪಿಸಿದರು. ಆಶ್ಚರ್ಯ! ಅದ್ಭುತ, ಇಡೀ ಪ್ರೇಕ್ಷಕರ ವರ್ಗವು ಭಗವಾನರನ್ನು ಕಂಡೊಡನೆಯೇ ಅವರನ್ನು ಹಿಂಬಾಲಿಸಿತು.
            ಉಗ್ರಸೇನನಿಗೆ ಆಘಾತವಾಯಿತು, ಆತನು ತನ್ನ ದೊಂಬರ ವಿದ್ಯೆಯನ್ನು ಪ್ರದಶರ್ಿಸಿ ಅಪಾರ ಕೀತರ್ಿಗಳಿಸಬೇಕೆಂದಿದ್ದನು. ಆದರೆ ಜನರೆಲ್ಲಾ ಆತನಿಗೆ ನಿರ್ಲಕ್ಷಿಸಿದ್ದನ್ನು ಕಂಡು ಆ ಕಂಬದ ಮೇಲೆಯೇ ನಿರಶನಾಗಿ ಕುಳಿತನು. ಆತನಿಗೆ ಅತೃಪ್ತಿ ಹಾಗು ಹತಾಶೆ ಉಂಟಾಯಿತು. ಆಗ ಭಗವಾನರು ಆತನನ್ನು ಕಂಡು ಹೀಗೆ ನುಡಿದರು: "ಉಗ್ರಸೇನಾ, ಜ್ಞಾನಿಯೊಬ್ಬನು ದೇಹ ಮತ್ತು ಮನಸ್ಸಿನ ಬಗೆಗಿನ ಅಂಟುವಿಕೆಯನ್ನು, ಆಸಕ್ತಿಯನ್ನು ತೊರೆದು, ಜನ್ಮಗಳಿಂದ ಪಾರಾಗಲು ವಿಮುಕ್ತಿ ಸಾಧಿಸಲು ಶ್ರಮಿಸಬೇಕು (ಇದು ಮಾತ್ರ ಶ್ರಮಿಸಲು ಯೋಗ್ಯವಾದ ವಿಷಯವಾಗಿದೆ, ಸಾಧಿಸಲು ಉನ್ನತವಾದ ಕ್ಷೇತ್ರವಾಗಿದೆ) ಎಂದರು.
            ನಂತರ ಈ ಮೇಲಿನ ಗಾಥೆಯನ್ನು ನುಡಿದರು. ಆ ಗಾಥೆಯ ನಿಜವಾದ ಅರ್ಥವನ್ನು ಪೂರ್ಣವಾಗಿ ಗ್ರಹಿಸಿದಂತಹ ಉಗ್ರಸೇನನು ಇನ್ನೂ ಆ ಕಂಬದ ಮೇಲಿರುವಂತೆಯೇ ಅರಹತ್ವವನ್ನು ಸಾಧಿಸಿಬಿಟ್ಟನು. ನಂತರ ಆತನು ಕೆಳಗಿಳಿದು, ಭಗವಾನರಲ್ಲಿ ಅಪ್ಪಣೆ ಪಡೆದು ಸಂಘವನ್ನು ಸೇರಿದನು.
            ಒಂದುದಿನ ಉಗ್ರಸೇನನು ಭಿಕ್ಷುಗಳಿಗೆ ತಾನು ಕಂಬದ ತುದಿಯಲ್ಲಿದ್ದಾಗಲೂ ಭೀತಿಪಡಲಿಲ್ಲವೆಂದಾಗ ಭಿಕ್ಷುಗಳು ಭಗವಾನರಿಗೆ ಹೀಗೆ ಕೇಳಿದರು: "ಭಗವಾನ್, ಉಗ್ರಸೇನ ಅರಹಂತನಾಗಿರುವನೇ? ಇದು ನಿಜವೇ?"
            ಆಗ ಭಗವಾನರು ಈ ಗಾಥೆ ನುಡಿದರು: "ಯಾರು ಸಂಯೋಜನಗಳೆಲ್ಲಾ ಕತ್ತರಿಸಿಹಾಕಿದ್ದಾನೋ, ಭಯರಹಿತನೋ, ಎಲ್ಲಾ ಅಂಟುವಿಕೆಯಿಂದ ಮುಕ್ತನೋ, ಕಲ್ಮಶರಹಿತನೋ ಆತನನ್ನು ನಾನು ಬ್ರಾಹ್ಮಣನೆನ್ನತ್ತೇನೆ." (397).
            "ಭಿಕ್ಷುಗಳೇ ಆತನು ಅರಹಂತನಾಗಿದ್ದಾನೆ."

            ಒಮ್ಮೆ ಭಿಕ್ಷುಗಳು ಈತನ ಬಗ್ಗೆಯೇ ಚಚರ್ಿಸುತ್ತಿದ್ದಾಗ ಅಲ್ಲಿಗೆ ಭಗವಾನರು ಬಂದರು. ಆಗ ಅಲ್ಲಿಗೆ ಬಂದ ಭಗವಾನರು ಆತನ ಹಿಂದಿನ ಜನ್ಮದ ವಿಷಯ ತಿಳಿಸಿದರು. ಆತನು ಕಸ್ಸಪ ಬುದ್ಧರ ಕಾಲದಲ್ಲಿದ್ದನು. ಒಂದುದಿನ ಆತನು ಮತ್ತು ಆತನ ಪತ್ನಿಯು ಭಿಕ್ಷುಗಳಿಗೆ ಆಹಾರ ದಾನ ನೀಡಿ, ಸಕಲ್ಪ ಮಾಡಿದ್ದನು. "ಪೂಜ್ಯರೇ, ನಾನು ಪರಮಸತ್ಯವನ್ನು ಸಾಕ್ಷಾತ್ಕರಿಸುವ ಸಾಮಾಣ್ಯ ಪಡೆಯಲಿ." ಯಾರಿಗೆ ಆತನು ದಾನ ಮಾಡಿದ್ದನೋ ಆತನು ಅಭಿಜ್ಞಾ ಪಡೆದಂತಹ ಅಹರಂತನಾಗಿದ್ದನು. ಆತನಿಗೆ ಈತನು ಭವಿಷ್ಯದಲ್ಲಿ ಸಾಧಿಸುವುದು ಗೊತ್ತಾಗಿ ಮುಗುಳ್ಮಗೆ ಬೀರಿದರು. ಆದರೆ ಇದನ್ನು ಅಪಾರ್ಥವಾಗಿ ತಿಳಿದ ಉಗ್ರಸೇನನು ಅವರನ್ನು ನಟನೆಂದು ಟೀಕೆ ಮಾಡಿದ್ದನು. ಅದರ ಫಲವಾಗಿ ಈ ಜನ್ಮದಲ್ಲಿ ನಾಟಕ ದೊಂಬರಾಟದವರ ಹಿಂದೆ ಹೀಗೆ ಅಲೆಯಬೇಕಾಯಿತು" ಎಂದರು. 

No comments:

Post a Comment