Friday 3 July 2015

dhammapada/kodhavagga/17.4/howtobecomegods

ಸತ್ಯ, ಅಕ್ರೋಧ, ದಾನದಿಂದಲೇ ದೇವತೆಗಳ
ಸಾನಿಧ್ಯ ಪಡೆಯಬಹುದು

"ಸತ್ಯವನ್ನೇ ನುಡಿ,
ಕೋಪಗೊಳ್ಳಬೇಡ ಮತ್ತು
ಯೋಚಿಸಿದವರಿಗೆ ಅಲ್ಪದಾನವನ್ನದರೂ ನೀಡು,
ಈ ಮೂರರಿಂದಲೇ ದೇವತೆಗಳ ಸಮೀಪ ಹೋಗಬಹುದು."            (224)

ಗಾಥ ಪ್ರಸಂಗ 17:4
ದೇವ ದೇವತೆಗಳಾಗುವುದು ಹೇಗೆ ?


            ಒಮ್ಮೆ ಪರಮಪೂಜ್ಯ ಮಹಾ ಮೊಗ್ಗಾಲಾನರವರು ದೇವಲೋಕಕ್ಕೆ ಭೇಟಿಯಿತ್ತರು. ಅಲ್ಲಿ ಹಲವಾರು ದೇವ-ದೇವತೆಗಳು ಸುಖಪೂರ್ವಕವಾಗಿ ವೈಭೋಗಗಳಿಂದ ಕೂಡಿದ್ದರು. ಆಗ ಮೊಗ್ಗಲಾನರವರಿಗೆ ಇವರು ಯಾವ ಪುಣ್ಯಗಳಿಂದ ಹೀಗಾಗಿರುವರು ಎಂಬ ಜಿಜ್ಞಾಸೆ ಉಂಟಾಗಿ ಅವರೆಲ್ಲರಿಗೂ ಪ್ರತ್ಯೇಕವಾಗಿ ಪ್ರಶ್ನೆಯನ್ನು ಕೇಳಿದರು.
            "ನೀವು ಯಾವ ಪುಣ್ಯ ಕರ್ಮ ಮಾಡಿದ್ದರಿಂದಾಗಿ ದೇವ ಜನ್ಮ ತಾಳಿರುವಿರಿ?"
            ಆಗ ಅವರೆಲ್ಲರೂ ವಿವಿಧರೀತಿಯಲ್ಲಿ ಹೀಗೆ ಉತ್ತರಿಸಿದರು:
            "ನಾನು ಐಶ್ವರ್ಯವನ್ನು ದಾನ ಮಾಡಿದೆನು."
            "ನಾನು ಧಮ್ಮವನ್ನು ಸದಾ ಆಲಿಸುತ್ತಿದ್ದೆನು."
            "ನಾನು ಸದಾ ಸತ್ಯವನ್ನು ನುಡಿದೆನು."
            "ನಾನು ಕೋಪವನ್ನೇ ಮಾಡಿಕೊಳ್ಳಲಿಲ್ಲ."
            "ನಾನು ನನಗೆ ಹಿಂಸಿಸಿದವರ ಮೇಲೆ ದ್ವೇಷಿಸಲಿಲ್ಲ."
            "ನಾನು ಕಬ್ಬನ್ನು ಭಿಕ್ಷುಗಳಿಗೆ ದಾನ ಮಾಡಿದೆನು."
            "ನಾನು ಹಣ್ಣನ್ನು ಭಿಕ್ಷುಗಳಿಗೆ ದಾನ ಮಾಡಿದೆನು."
            "ನಾನು ತರಕಾರಿಯನ್ನು ಭಿಕ್ಷುಗಳಿಗೆ ದಾನ ಮಾಡಿದೆನು."
            ಅಲ್ಲಿಂದ ಹಿಂತಿರುಗಿದ ಮಹಾ ಮೊಗ್ಗಲಾನರು ಭಗವಾನರಲ್ಲಿ "ಇದು ಸಾಧ್ಯವೇ?" ಎಂದು ಪ್ರಶ್ನಿಸಿದರು.
            ಆಗ ಭಗವಾನರು "ಓ ಮೊಗ್ಗಲಾನ, ನೀನೇ ಸ್ವತಃ ನೋಡಿ, ಕೇಳಿ ಸಂಶಯಪಡುವೆ ಏಕೆ? ಅಲ್ಪ ಪುಣ್ಯ ಕರ್ಮಗಳಿಂದಲೂ ಸಹಾ ದೈವತ್ವವನ್ನು ಪಡೆಯಬಹುದು ಎಂದು ಹೇಳಿ ಈ ಗಾಥೆಯನ್ನು ನುಡಿದರು.


No comments:

Post a Comment