Friday 3 July 2015

dhammapada/kodhavagga/17.6/punna'squestion

ಜಾಗರೂಕರಲ್ಲಿ ಆಸವಗಳು ಅವಸಾನವಾಗುತ್ತದೆ
"ಸದಾ ಜಾಗರೂಕರಾಗಿರುವವರ,
ಹಗಲು ರಾತ್ರಿ ಶಿಕ್ಷಣದಲ್ಲೇ (ಶಿಸ್ತಿನಲ್ಲಿ) ತಲ್ಲೀನರಾಗಿರುವವರ
ನಿಬ್ಬಾಣದಲ್ಲಿ ಆಕಾಂಕ್ಷಿತರಾಗಿರುವವರ
ಆಸವಗಳು ನಾಶವಾಗುತ್ತವೆ."      (226)

ಗಾಥ ಪ್ರಸಂಗ 17:6
ದಾಸಿ ಪುಣ್ಣಾಳ ಪ್ರಜ್ಞಾಯುತ ಪ್ರಶ್ನೆ

            ಪುಣ್ಣಾಳೆಂಬ ದಾಸಿಯು ಸದಾ ಅತಿಯಾದ ಕೆಲಸ ಮಾಡಬೇಕಿತ್ತು. ಒಂದುದಿನ ಆಕೆಯು ಭತ್ತವನ್ನು ಕುಟ್ಟುತ್ತಿದ್ದಳು. ಆಕೆ ಹಾಗೆಯೇ ನಡುರಾತ್ರಿಯವರೆಗೂ ಕುಟ್ಟುತ್ತಿದ್ದಳು. ನಂತರ ಆಯಾಸವಾಗಿ, ತುಸು ಉಲ್ಲಾಸಿತಳಾಗಲು ಹೊರಗಡೆ ಬಂದಳು ಹಾಗು ಗಾಳಿಗೆ ಎದುರಾಗಿ ನಿಂತು ವಿಶ್ರಾಂತಿಯ ಅನುಭೂತಿ ಪಡೆದಳು. ಅಪಾರ ಬೆವರಿನಿಂದ ಆಕೆ ಕೂಡಿದ್ದರಿಂದ ಹೀಗೆ ಆಕೆ ವಿಶ್ರಾಂತಿ ಪಡೆಯುತ್ತಿದ್ದಳು. ಅದೇ ವೇಳೆಯಲ್ಲಿ ಮಲ್ಲರ ದಬ್ಬನು ಭಿಕ್ಷುಗಳಿಗೆ ವಾಸಸ್ಥಳದ ಪಾರುಪತ್ಯಗಾರಿಕೆ ವಹಿಸುತ್ತಿದ್ದನು. ಧಮ್ಮವನ್ನು ಆಲಿಸಿದ ನಂತರ ಆತನು ಭಿಕ್ಷುಗಳಿಗೆ ಅವರಿಗನುಗುಣವಾಗಿ ವಾಸಸ್ಥಳಗಳನ್ನು ತೋರಿಸುತ್ತಿದ್ದನು. ಆತನಲ್ಲಿ ಅತೀಂದ್ರಿಯ ಶಕ್ತಿಯೊಂದಿತ್ತು. ಆದ್ದರಿಂದಾಗಿ ಆತನು ಬೆರಳಿನಿಂದಲೇ ಬೆಳಕನ್ನು ಸೃಷ್ಟಿಸಿ ಅದರಿಂದಲೇ ಭಿಕ್ಷುಗಳಿಗೆ ಪರ್ವತಗಳಲ್ಲಿ ದಾರಿ ತೋರಿಸುತ್ತಿದ್ದನು.
            ರಾತ್ರಿ ಪರ್ವತಗಳಲ್ಲಿ ಚಲಿಸುತ್ತಿದ್ದ ಭಿಕ್ಷುಗಳನ್ನು ಕಂಡು ಆಕೆ ಹೀಗೆ ಯೋಚಿಸಿದಳು. "ನಾನಂತು ದೌಭರ್ಾಗ್ಯವಶಳಾಗಿ ಈ ಸಮಯದಲ್ಲಿ ನಿದ್ರೆಯಿಲ್ಲದೆ ಶ್ರಮಿಕಳಾಗಿದ್ದೇನೆ. ಆದರೆ ಈ ಪೂಜ್ಯರು ಏತಕ್ಕಾಗಿ ನಿದ್ರೆಯಿಲ್ಲದೆ ಇದ್ದಾರೆ? ಓಹ್! ಬಹುಶಃ ಅಲ್ಲಿ ಯಾರಾದರೂ ಒಬ್ಬ ಭಿಕ್ಷುವು ರೋಗಿಯಾಗಿ ಬಳಲುತ್ತಿರಬಹುದು" ಎಂದು ಯೋಚಿಸಿ ಆಕೆಯು ಮಾರನೆಯದಿನ ಮುಂಜಾನೆ ಎದ್ದು ಅಕ್ಕಿಹಿಟ್ಟಿಗೆ ನೀರು ಬೆರೆಸಿ ರೊಟ್ಟಿಯನ್ನು ತಯಾರಿಸಿದಳು. ನಂತರ ಆ ರೊಟ್ಟಿಯನ್ನು ತನ್ನ ವಸ್ತ್ರದಲ್ಲಿರಿಸಿ ನಂತರ ತಿಂದರೆ ಆಯಿತೆಂದುಕೊಂಡು ನದಿಯ ದಡದೆಡೆಗೆ ಹೋದಳು. ಅದೇ ಸಮಯದಲ್ಲಿ ಭಗವಾನರು ಅದೇ ದಾರಿಯಲ್ಲಿ ಬರುತ್ತಿದ್ದರು. ಅವರು ಆಹಾರಕ್ಕಾಗಿ ಹಳ್ಳಿಯನ್ನು ಪ್ರವೇಶಿಸಿದ್ದರು. ಅವರನ್ನು ಕಂಡಕೂಡಲೇ ಅವರು ಆಹಾರಕ್ಕಾಗಿ ಹಳ್ಳಿಯನ್ನು ಪ್ರವೇಶಿಸಿದ್ದರು. ಅವರನ್ನು ಕಂಡಕೂಡಲೇ ಆಕೆಯು ಹೀಗೆ ಯೋಚಿಸಿದಳು: 'ಈ ಹಿಂದೆ ನಾನು ಭಗವಾನರನ್ನು ಕಂಡಾಗ ನನ್ನಲ್ಲಿ ಅವರಿಗೆ ನೀಡಲು ಏನೂ ಇರುತ್ತಿರಲಿಲ್ಲ ಅಥವಾ ಕೆಲವೊಮ್ಮೆ ನನ್ನ ಬಳಿ ಆಹಾರ ಇದ್ದಾಗ ಭಗವಾನರು ಸಿಗುತ್ತಿರಲಿಲ್ಲ. ಆದರೆ ಇಂದು ಮಹಾಸುದಿನವಾಗಿದೆ ಭಗವಾನರು ಎದುರಾಗಿಯೇ ಬರುತ್ತಿದ್ದರೆ. ನನ್ನಲ್ಲಿ ಆಹಾರವೂ ಇದೆ. ಅವರು ಈ ರೊಟ್ಟಿಯನ್ನು ಉಚ್ಚವಾದುದು ಅಥವಾ ನೀಚವಾದುದು ಎಂಬ ಭೇದಭಾವವಿಲ್ಲದೆ ಸ್ವೀಕರಿಸುವುದಾದರೆ ನಾನು ಅವರಿಗೆ ದಾನ ನೀಡುವೆನು" ಹೀಗೆ ಯೋಚಿಸುತ್ತ ಆಕೆಯು ನೀರಿನ ಕೊಡವನ್ನು ಒಂದೆಡೆ ಇಟ್ಟು, ಭಗವಾನರಿಗೆ ವಂದಿಸಿದಳು. ನಂತರ ಹೀಗೆ ಹೇಳಿದಳು: "ಭಗವಾನ್, ಈ ಆಹಾರ ಸ್ವೀಕರಿಸಿ ನನ್ನನ್ನು ಧನ್ಯನನ್ನಾಗಿಸಿ."
            ಆಗ ಭಗವಾನರು ಆನಂದನತ್ತ ನೋಡಿದರು: ಆಗ ಆನಂದರು ಭಗವಾನರಿಗೆ ಪಿಂಡಪಾತ್ರೆಯನ್ನು ನೀಡಿದರು. ಭಗವಾನರು ಆ ಪಿಂಡಪಾತ್ರೆಯಿಂದ ಆಕೆಯ ರೊಟ್ಟಿಯನ್ನು ಸ್ವೀಕರಿಸಿದರು. ಅಲ್ಲೇ ಆನಂದರು ಚೀವರವನ್ನು ನೆಲದ ಮೇಲೆ ಹಾಸಲು, ಭಗವಾನರು ಅಲ್ಲೇ ಕುಳಿತು ಆಕೆಯ ಆಹಾರ ಸೇವಿಸಿದರು.
            ನಂತರ ಆಕೆಯು ತನ್ನಲ್ಲಿನ ಸಂಶಯವನ್ನು ಹೇಳಲು ಹಿಂಜರಿಯುತ್ತಿದ್ದಳು. ಆಗ ಭಗವಾನರು ಪುಣ್ಣಾಳ ಹಿಂಜರಿಕೆ ಹೋಗಲಾಡಿಸಲು ಹೀಗೆ ಕೇಳಿದರು.
            "ಪುಣ್ಣಾ, ನನ್ನ ಶಿಷ್ಯರನ್ನೇಕೆ ನಿಂದಿಸುವೆ."

            "ಓಹ್, ಇಲ್ಲ ಭಗವಾನ್, ನಾನು ನಿಂದಿಸಲಿಲ್ಲ, ನಾನು ಕೇವಲ ಹೀಗೆ ಸಂಶಯಪಟ್ಟೆನು. ಅದೆಂದರೆ: ನಾನಂತು ನನ್ನ ಶಾರೀರಿಕ ಶ್ರಮದಿಂದಾಗಿ, ಅಹಿತವುಂಟಾಗಿ ನಿದ್ರಿಸಲಾಗುತ್ತಿಲ್ಲ. ಆದರೆ ಈ ಪೂಜ್ಯರು ಏತಕ್ಕಾಗಿ ನಿದ್ರಿಸುತ್ತಿಲ್ಲ?! ಯಾರಾದರೂ ಭಿಕ್ಷುವು ರೋಗಕ್ಕೆ ಈಡಾಗಿರಬಹುದು ಅಥವಾ ಸರಿಸೃಪದ ಕಚ್ಚುವಿಕೆಯಿಂದಾಗಿ ನರಳುತ್ತಿರಬಹುದೇ? ಎಂದಷ್ಟೇ ಯೋಚಿಸಿದೆನು" ಎಂದಳು. ಆಗ ಭಗವಾನರು ಆಕೆಗೆ ಹೀಗೆ ಹೇಳಿದರು: "ಪುಣ್ಣಾ, ನೀವು ಬಡವಳಾದ್ದರಿಂದಾಗಿ ಮತ್ತು ಅತಿಶ್ರಮದ ಕಾರಣದಿಂದಾಗಿ ನಿದ್ರಿಸಲಾಗುತ್ತಿಲ್ಲ, ಆದರೆ ನನ್ನ ಮಕ್ಕಳಾದ ಭಿಕ್ಷುಗಳು ನಿದ್ರಿಸದಿರುವುದು ಏಕೆಂದರೆ ಅವರು ಸದಾ ಜಾಗೃತರು ಮತ್ತು ಸ್ಮೃತಿವಂತರಾಗಿರಲೇಬೇಕು. ಜೀವನದಲ್ಲಿ ಯಾವುದೇ ಸ್ಥಾನವಿರಲಿ, ಒಬ್ಬನು ಸ್ಮೃತಿವಂತನಾಗಲು ಮತ್ತು ಜಾಗರೂಕನಾಗಲು ಎಂದಿಗೂ ದಣಿವು ತಾಳಬಾರದು, ಬೇಸರ ಪಡಬಾರದು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಆಗ ಪುಣ್ಣಾ ಸತ್ಯ ಗ್ರಹಿಸಿದಳು.

No comments:

Post a Comment