Monday 5 October 2015

dhammapada/brahmanavagga/26.17/themotherofsariputta

ಕೋಪರಹಿತನಾಗಿ ಅಂತಿಮ ಶರೀರ ಹೊಂದಿದವನೇ ಬ್ರಾಹ್ಮಣ
ಯಾರು ಅಕ್ರೋಧನೋ, ಧಮ್ಮದಲ್ಲಿ ಪರಿಶ್ರಮಿಯೋ,
ಶೀಲವಂತನೋ, ಯಾರಲ್ಲಿ ತೃಷ್ಣೆ ಹರಿಯದೋ,
ಧಮಿಸಲ್ಪಟ್ಟವನೋ, ಅಂತಿಮ ಶರೀರವನ್ನು
ಹೊಂದಿರುವನೋ ಅಂಥವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.       (400)

ಗಾಥ ಪ್ರಸಂಗ 26.17
ಸಾರಿಪುತ್ರರ ಮಾತೆಯ ಸಂಕುಚಿತತೆ

                ಒಮ್ಮೆ ಸಾರಿಪುತ್ರರು 500 ಭಿಕ್ಷುಗಳಿಂದ ಕೂಡಿಕೊಂಡು ನಾಲಕ ಹಳ್ಳಿಗೆ ಹೋದರು. ತಾಯಿಗೆ ಪುಣ್ಯ ಲಭಿಸಲೆಂದು ಅವರು ತಾಯಿಯ ಮನೆಯ ಬಾಗಿಲಲ್ಲಿ ನಿಶ್ಶಬ್ದವಾಗಿ ನಿಂತರು. ಆಗ ತಾಯಿಗೆ ಆನಂದವೂ, ಜೊತೆಗೆ ಕೋಪವೂ ಉಂಟಾಯಿತು. ಆಕೆಯು ಅವರಿಗೆಲ್ಲಾ ಪೀಠವನ್ನು ಹಾಕಿ ಅವರಿಗೆಲ್ಲಾ ಆಹಾರದಿಂದ ಸತ್ಕರಿಸಿದಳು. ಆದರೆ ಜೊತೆಗೆ ಬೈಗುಳದ ಕಹಿಯನ್ನು ಹರಿಸಿದಳು: ಓ ಬಿಟ್ಟಂತಹ ಆಹಾರವನ್ನೇ ಸೇವಿಸುವವನೇ, ನೀನು ಅಪಾರ ಐಶ್ವರ್ಯವನ್ನು ಬಿಟ್ಟು ಭಿಕ್ಷುವಾಗಿ ನಮ್ಮನ್ನು ನಾಶಗೊಳಿಸಿರುವೆ. ಆಹಾರ ಸಂಪಾದನೆ ಮಾಡುವುದನ್ನು ಬಿಟ್ಟು ಅಪರಿಚಿತರ ಮನೆಗಳಿಗೆ ಹೋಗುವೆ. 80 ಕೋಟಿ ಐಶ್ವರ್ಯಕ್ಕೆ ವಾರಸುದಾರನಾಗಿ ಭಿಕ್ಷುವಾಗಿ ನನ್ನನ್ನು ನಾಶಮಾಡಿರುವೆ, ಈಗ ತಿನ್ನು ಎಂದು ಸಾರಿಪುತ್ರರನ್ನು ತರಾಟೆ ತೆಗೆದುಕೊಂಡಳು. ನಂತರ ಭಿಕ್ಷುಗಳತ್ತ ನೋಡಿದಳು: ಆಗ ಮತ್ತಷ್ಟು ಕೋಪವು ಉಕ್ಕಿ ಓಹ್, ನೀವೆಲ್ಲಾ ನನ್ನ ಮಗನಿಗೆ ನಿಮ್ಮ ದಾಸನನ್ನಾಗಿಸಿ ಕೊಂಡಿರುವಿರಲ್ಲವೇ, ತಿನ್ನಿ ಈಗ!
                ಆದರೆ ಸಾರಿಪುತ್ರರು ನಿಶ್ಶಬ್ದರಾಗಿಯೇ ಇದ್ದರು. ಅವರ ಈ ಶಾಂತತೆ ಗಮನಿಸಿದ ಭಿಕ್ಷುಗಳು ಸಹ ಶಾಂತರಾಗಿ ಸಹಿಸಿಕೊಂಡು ಆಹಾರ ಸೇವಿಸಿ ವಿಹಾರಕ್ಕೆ ಹಿಂತಿರುಗಿದರು.
                ಮಾರನೆಯ ದಿನ ರಾಹುಲನು ಭಗವಾನರನ್ನು ಆಹಾರಕ್ಕೆ ಆಹ್ವಾನಿಸಿದನು. ಆಗ ಭಗವಾನರು ರಾಹುಲನಿಗೆ ಹೀಗೆ ಕೇಳಿದರು: ರಾಹುಲ, ನಿನ್ನೆ ಎಲ್ಲಿ ಆಹಾರ ಸೇವಿಸಿದೆ.
                ಭಗವಾನ್, ನನ್ನ ಅಜ್ಜಿಯ (ಸಾರಿಪುತ್ರರು ಗುರುವಾದ್ದರಿಂದ ತಂದೆ ಸಮಾನರು, ಅವರ ತಾಯಿ ರಾಹುಲನಿಗೆ ಅಜ್ಜಿಯ ಸಮಾನ) ಮನೆಯಲ್ಲಿ.
                “ನಿನ್ನ ಅಜ್ಜಿಯು ನಿನ್ನ ಗುರುವಿಗೆ ಏನೆಂದಳು?”
                “ಭಗವಾನ್, ನಾನು ಹೇಳಲಾರದಂತಹ ಅಪಾರ ಬೈಯ್ಗಳನ್ನು ನೀಡಿದಳು.
                “ನಿನ್ನ ಗುರುವಿನ ಪ್ರತಿಕ್ರಿಯೆ ಹೇಗಿತ್ತು?”
                ಭಗವಾನ್ ಅವರು ಒಂದು ಮಾತನ್ನೂ ಆಡಲಿಲ್ಲ.
                ಅಂದು ಸಂಜೆ ಧಮ್ಮ ಸಭಾಂಗಣದಲ್ಲಿ ಇದೇ ಚಚರ್ೆಯು ನಡೆಯುತ್ತಿತ್ತು. ಸೋದರರೇ, ಸಾರಿಪುತ್ರರದು ಅದ್ಭುತವಾದ ಸಹನಾಶೀಲತೆ ಮತ್ತು ವಿಧೇಯತೆ. ಅವರು ಸ್ವಲ್ಪವೂ ಕೋಪ ತಾಳಲಿಲ್ಲ, ಹಾಗೆಯೇ ಬೇಸರವೂ ತಾಳಲಿಲ್ಲ. ಆಗ ಅಲ್ಲಿಗೆ ಬಂದಂತಹ ಭಗವಾನರು ಸಾರಿಪುತ್ರರ ಬಗ್ಗೆ ಈ ಗಾಥೆಯನ್ನು ನುಡಿದರು

No comments:

Post a Comment