Thursday 1 October 2015

dhammapada/brahmanavagga/26.3/marasquestion

ದಡಗಳಿಗೆ ಅತೀತನೇ ಬ್ರಾಹ್ಮಣ

ಯಾರು ಈ ದಡದಲ್ಲಿ (ಇಂದ್ರಿಯ ಆಧಾರಗಳು)
ಅಥವಾ ಆ ದಡದಲ್ಲಿ (ಇಂದ್ರಿಯ ವಿಷಯಗಳು)
ಇಲ್ಲವೋ, ಯಾರು ಈ ದಡ ಅಥವಾ ಆ ದಡದಲ್ಲಿ
ಸಿಗಲ್ಪಡುವುದಿಲ್ಲವೋ, ಯಾರು ಅಕ್ಷೊಭ್ಯನೋ,
ಹಾಗು ಸಂಯೋಜನಮುಕ್ತನೋ, ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.      (385)

ಗಾಥ ಪ್ರಸಂಗ 26.3
ಆಚೆಗಿನದು ಎಂದರೇನು ?
                ಒಮ್ಮೆ ಮಾರನು ಮಾನವ ವೇಷಧಾರಿಯಾಗಿ ಬಂದು ಭಗವಾನರಲ್ಲಿ ಹೀಗೆ ಕೇಳಿದನು: ಭಂತೆ, ನೀವು ಬಹಳಷ್ಟು ಸಾರಿ ಪಾರಂ ಎಂಬ ಪದವನ್ನು ಬಳಸಿರುವಿರಿ, ಏನಿದರ ಅರ್ಥ?

                ಆಗ ಭಗವಾನರಿಗೆ ಹೀಗೆ ಪ್ರಶ್ನಿಸುತ್ತಿರುವುದು ಮಾರನೇ ಎಂದು ತಿಳಿಯಿತು. ಅಷ್ಟೇ ಅಲ್ಲದೆ ಆತನ ಉದ್ದೇಶವೂ ಅವರಿಗೆ ಅರ್ಥವಾಗಿ ಹೀಗೆ ಉತ್ತರಿಸಿದರು: ಓ ಮಾರನೇ, ಪಾರಂ ಮತ್ತು ಅಪಾರಂ ಎಂಬ ಪದಗಳಿಂದ ನಿನಗಂತೂ  ಮಾಡಬೇಕಾಗಿರುವುದೇನೂ ಇಲ್ಲ. ಪಾರಂ ಎಂದರೆ ಆಚೆಗಿನ ದಡ, ಅಲ್ಲಿ ಕೇವಲ ಕಲ್ಮಶಮುಕ್ತರಿಂದ ಅರಹಂತರು ಮಾತ್ರವೇ ಹೋಗಬಲ್ಲರು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment