Thursday 8 October 2015

dhammapada/brahmanavagga/26.29/revata'sgreatness

ಶೋಕರಹಿತನೇ ಬ್ರಾಹ್ಮಣ
ಯಾರು ಪುಣ್ಯದ ಮತ್ತು ಪಾಪದ ಬಂಧನಗಳಿಗೆ
ಅತೀತನಾಗಿರುವನೋ, ಅಶೋಕನೋ (ಶೋಕವಿಲ್ಲದವನು)
ವಿರಜನೋ (ಕಲೆರಹಿತನೋ), ಶುದ್ಧನೋ ಅಂತಹನಿಗೆ
ನಾನು ಬ್ರಾಹ್ಮಣ ಎನ್ನುತ್ತೇನೆ.      (412)
ಗಾಥ ಪ್ರಸಂಗ 26.29
ಭಿಕ್ಷು ರೇವತರವರ ಘನತೆ

                ರೇವತರವರು ಯಾವುದನ್ನೂ ದಾನದಲ್ಲೇ ಸ್ವೀಕರಿಸುತ್ತಿರಲಿಲ್ಲ. ಅಂದರೆ ಅಲ್ಪ ತೃಪ್ತರಾಗಿದ್ದರು. ಪ್ರತಿಯೊಂದನ್ನು ಅವರು ಪ್ರಶ್ನಾತ್ಮಕವಾಗಿ ವೀಕ್ಷಿಸುತ್ತಿದ್ದರು. ಎಲ್ಲದರಲ್ಲೂ ಅವರು ವಿಮಶರ್ಾತ್ಮಕವಾಗಿ ಯೋಚಿಸುತ್ತಿದ್ದರು. ಕ್ಷಣಾರ್ಧದಲ್ಲಿ ಧ್ಯಾನ ಪ್ರವೇಶಿಸುವವರಲ್ಲಿ ಅವರೇ ಅಗ್ರಗಣ್ಯರಾಗಿದ್ದರು. ಏಳು ದಿನಗಳ ಕಾಲ ನಿರೋಧ ಸಮಾಪತ್ತಿಯಲ್ಲಿ ತನ್ಮಯರಾಗುತ್ತಿದ್ದರು. ಅವರು ನೂರಾರು ಭಿಕ್ಷುಗಳಿಗಾಗಿ ಹಲವಾರು ವಿಹಾರಗಳನ್ನು ನಿಮರ್ಿಸಿದ್ದರು. ಜನರಿಂದ ಲಾಭ-ಸತ್ಕಾರ ಹೇರಳವಾಗಿ ಪಡೆದಿದ್ದರು. ಹಾಗಿರುವಾಗಲೂ ಅವರು ವನದಲ್ಲಿಯೇ ಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದರು.
                ಒಮ್ಮೆ ಭಿಕ್ಷುಗಳು ಅವರ ಬಗ್ಗೆ ಚಚರ್ಿಸುತ್ತಾ ಅವರನ್ನು ಪ್ರಶಂಸಿಸುತ್ತಿರುವಾಗ ಭಗವಾನರು ಅಲ್ಲಿಗೆ ಬಂದರು. ನಂತರ ಹೀಗೆ ಕೇಳಿದರು: ಭಿಕ್ಷುಗಳೇ, ಇಲ್ಲಿ ಯಾವ ವಿಷಯವನ್ನು ಚಚರ್ಿಸುತ್ತಿರುವಿರಿ.
                ಅವರು ಭಂತೆ ರೇವತರ ಬಗ್ಗೆ ಎಂದರು.

                ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment