Thursday 8 October 2015

dhammapada/brahmanavagga/26.33/jatilabhikku

ತೃಷ್ಣೆ ತ್ಯಾಗಿಯೇ ಬ್ರಾಹ್ಮಣ
ಯಾರು ಇಲ್ಲಿ ತೃಷ್ಣೆಯನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿ
ಯಾರು ತೃಷ್ಣೆಯನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.      (416)

ಗಾಥ ಪ್ರಸಂಗ 26.33           
ಜಟಿಲ ಭಿಕ್ಷುವಿನ ತ್ಯಾಗಪೂರ್ಣತೆ

                ಹಿಂದಿನ ಬುದ್ಧ ಭಗವಾನರಾದ ಕಸ್ಸಪರವರ ಪರಿನಿಬ್ಬಾಣದ ನಂತರ ಅರಹಂತ ಭಿಕ್ಷುವೊಬ್ಬರು ಕಸ್ಸಪ ಬುದ್ಧರ ಅಸ್ತಿಯ ಮೇಲೆ ಸ್ತೂಪ ನಿಮರ್ಿಸಲು ನಿರ್ಧರಿಸಿದರು. ಅವರು ಎಲ್ಲಾ ಕಡೆಗಳಿಂದ ಚಂದಾ ಸಂಗ್ರಹಿಸುತ್ತಿದ್ದರು. ಒಮ್ಮೆ ಅವರು ಅಕ್ಕಸಾಲಿಗನ ಮನೆಗೆ ಚಂದಾ ಸಂಗ್ರಹಣೆಗೆ ಬಂದಾಗ ಅಲ್ಲಿ ಅಕ್ಕಸಾಲಿಗ ಮತ್ತು ಆತನ ಪತ್ನಿಯು ಜಗಳವಾಡುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿಗೆ ಭಿಕ್ಷುವು ಬಂದಾಗ ಆ ಕೋಪವು ಭಿಕ್ಷುವಿನತ್ತ ತಿರುಗಿತು. ಆತ ಕೋಪದಿಂದ ಹೀಗೆ ಹೇಳಿದನು: ನೀವು ಅಸ್ತಿ ಎಸೆದು ಹಿಂತಿರುಗುವುದು ಒಳ್ಳೆಯದು. ಇದರಿಂದ ಗಾಬರಿಯಾದ ಪತ್ನಿಯು ತಕ್ಷಣ ಪತಿಗೆ ಹೀಗೆ ಬುದ್ಧಿವಾದ ಹೇಳಿದಳು: ನಿಮಗೆ ಕೋಪ ಉಂಟಾಗಿದ್ದರೆ ನನ್ನನ್ನು ಬೈಯಿರಿ, ಬೇಕಾದರೆ ಹೊಡೆಯಿರಿ. ಆದರೆ ಬುದ್ಧರ ಬಗ್ಗೆ ಹಾಗು ಭಿಕ್ಷುವಿನ ಬಗ್ಗೆ ಕೋಪ ಬೇಡ, ಬೈಗುಳ ಬೇಡ, ನೀವು ನಿಜಕ್ಕೂ ಮಹಾಪಾಪ ಮಾಡುತ್ತಿರುವಿರಿ. ಆ ಮಾತುಗಳನ್ನು ಕೇಳಿ ತಕ್ಷಣ ಜಾಗ್ರತನಾದ ಅಕ್ಕಸಾಲಿಗನು ತಕ್ಷಣ ಕೆಲವು ಚಿನ್ನದ ಹೂಗಳನ್ನು ನಿಮರ್ಿಸಿ, ಅವನ್ನು ಚಿನ್ನದ ಬಂಡಿಗಳಲ್ಲಿ ಹಾಕಿ ಕಸ್ಸಪ ಬುದ್ಧರ ಸ್ತೂಪಕ್ಕೆ ಸಮಪರ್ಿಸಿದನು.
*   *   *
                ಈಗಿನ ಬುದ್ಧರ ಕಾಲದಲ್ಲಿ ಆ ಅಕ್ಕಸಾಲಿಗನು ಶ್ರೀಮಂತ ಯುವತಿಯ ಗರ್ಭದಲ್ಲಿ ಹುಟ್ಟಿದ್ದನು. ಆಕೆಗೆ ಇನ್ನೂ ವಿವಾಹವಾಗದ ಕಾರಣ, ಆಕೆಯು ಲೋಕನಿಂದೆಗೆ ಹೆದರಿ ಆ ಮಗುವನ್ನು ಮಡಿಕೆಯಲ್ಲಿ ಇರಿಸಿ ಹೊಳೆಯಲ್ಲಿ ಬಿಟ್ಟಳು. ಅದು ಸ್ನಾನ ಮಾಡುತ್ತಿದ್ದ ಮತ್ತೊಬ್ಬ ಯುವತಿಗೆ ಸಿಕ್ಕಿತು. ಆಕೆ ಆ ಮಗುವನ್ನು ಸಾಕಿ ಜಟಿಲನೆಂದು ಹೆಸರಿಟ್ಟಳು. ನಂತರ ಭಿಕ್ಷುವೊಬ್ಬರ ಸಲಹೆಯಂತೆ ಆ ಸ್ತ್ರೀಯು ಆತನಿಗೆ ತಕ್ಷಶಿಲೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದಳು. ತಕ್ಷಶಿಲೆಯಲ್ಲಿ ಆತನು ಶ್ರೀಮಂತ ವರ್ತಕನ ಮನೆಯಲ್ಲಿ ಉಳಿಯುವಂತೆ ಆ ಭಿಕ್ಷುವು ತನ್ನ ಶಿಷ್ಯನಾದ ಶ್ರೀಮಂತನಿಗೆ ತಿಳಿಸಿ ವ್ಯವಸ್ಥೆ ಮಾಡಿಸಿದರು. ಕಾಲನಂತರ ಆ ಶ್ರೀಮಂತ ವರ್ತಕನ ಮಗಳೊಂದಿಗೆ ಜಟಿಲನ ವಿವಾಹವು ಆಯಿತು. ನಂತರ ಈ ನೂತನ ದಂಪತಿಗೆಂದು ಮನೆ ಕಟ್ಟಿಸುವಾಗ ಅಪಾರ ಪ್ರಮಾಣದ ಚಿನ್ನವು ಭೂಮಿಯಲ್ಲಿ ಸಿಕ್ಕಿತು. ನಂತರ ಸುಖವಾಗಿ ಸಾಗಿದ ಸಂಸಾರದಲ್ಲಿ ಆತನಿಗೆ ಮೂರು ಮಕ್ಕಳು ಹುಟ್ಟುತ್ತಾರೆ. ಇದಾದ ನಂತರ ಜಟಿಲನು ಭಿಕ್ಷುವಾಗಿ ಸಂಘ ಸೇರಿ ಮುಂದೆ ಅರಹಂತನಾಗುತ್ತಾನೆ.
                ಒಂದುದಿನ ಭಗವಾನರು ಭಿಕ್ಷುಗಳೊಂದಿಗೆ ಜಟಿಲನ ಮಗನ ಮನೆಗೆ ಜಟಿಲನೊಂದಿಗೆ ಬಂದರು. ಜಟಿಲನ ಮಗನು ಭಗವಾನರಿಗೆ ಮತ್ತು ಭಿಕ್ಷುಗಳಿಗೆ 15 ದಿನಗಳ ಕಾಲ ಆಹಾರ ದಾನ ಮಾಡಿದನು. ಈ ಘಟನೆಯ ನಂತರ ಭಿಕ್ಷುಗಳು ಜಟಿಲನಿಗೆ ಹೀಗೆ ಕೇಳಿದರು: ಭಿಕ್ಷು ಜಟಿಲ, ಈಗಲೂ ನಿನ್ನ ಮನಸ್ಸು ನಿನ್ನ ಪುತ್ರರ ಬಗ್ಗೆ, ಐಶ್ವರ್ಯದ ಬಗ್ಗೆ ಸುಳಿದಾಡುತ್ತಿರಬೇಕಲ್ಲವೇ?
                “ಇಲ್ಲ, ನನಗೆ ಅದ್ಯಾವ ಬಂಧನಗಳು ಇಲ್ಲ ಮತ್ತು ಅಂಟುವಿಕೆಯು ಇಲ್ಲ.

                ಇದರಿಂದ ಆಶ್ಚರ್ಯಗೊಂಡ ಭಿಕ್ಷುಗಳು ಭಗವಾನರಿಗೆ ಈ ವಿಷಯ ತಿಳಿಸಿದಾಗ ಭಗವಾನರು ಸಹಾ ಆತನು ಅರಹಂತನೆಂದು ತಿಳಿಸಿ ಈ ಮೇಲಿನ ಗಾಥೆ ನುಡಿದರು. 

No comments:

Post a Comment