Thursday 8 October 2015

dhammapada/brahmanavagga/26.31/shivali

ಮೋಹಾಂಧಕಾರದ ಸಂಸಾರ ದಾಟಿದವನೇ ಬ್ರಾಹ್ಮಣ
ಯಾರು ಅಪಾಯಕಾರಿಯಾದ ಕೆಸರನ್ನು (ಭಾವೋದ್ರೇಕ)
ದಾಟಿದ್ದಾನೆಯೋ, ದುರ್ಗಮವಾದ ದಾರಿಯನ್ನು (ಕಲ್ಮಶಗಳನ್ನು)
ಹಾದುಹೋಗಿರುವನೋ, ಸಂಸಾರದ ಸಾಗರವನ್ನೇ ದಾಟಿರುವನೋ ಮತ್ತು
ಮೋಹಾಂಧಕಾರವನ್ನು ಹಾಗು ನಾಲ್ಕು ಬಗೆಯ ಪ್ರವಾಹವನ್ನು
ದಾಟಿ ಆ ಬದಿಯ ದಡವನ್ನು (ನಿಬ್ಬಾಣ)
ತಲುಪಿರುವನೋ, ಯಾರು ಸಮಥ ಮತ್ತು ವಿಪಸ್ಸನವನ್ನು
ಅಭ್ಯಸಿಸಿ, ತೃಷ್ಣೆ ಮುಕ್ತನಾಗಿ, ಸಂದೇಹ ದೂರವಾಗಿ, ಯಾವುದಕ್ಕೂ
ಅಂಟದೆ, ಪರಿಪೂರ್ಣ ಶಾಂತತೆಯಲ್ಲಿಹನೋ ಅಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.      (414)

ಗಾಥ ಪ್ರಸಂಗ 26.31
ಶಿವಾಲಿಯ ದೀರ್ಘಕಾಲದ ಗಭರ್ಾವಾಸ

                ಕೋಲಿಯಾದ ರಾಜಕುಮಾರಿ ಸುಪ್ಪವಾಸಳು ದೀರ್ಘಕಾಲದ ಗಭರ್ಾವಸ್ಥೆಯ ದುಃಖವನ್ನು ಅನುಭವಿಸಿದಳು. ಆಕೆಯ ಗರ್ಭದಲ್ಲಿ ಶಿಶುವು ಏಳು ವರ್ಷ ಹಾಗೂ ಏಳು ದಿನಗಳ ಕಾಲವಿತ್ತು. ಆಕೆಯು ನೋವನ್ನು ಭರಿಸಲಾರದೆ ತ್ರಿಶರಣರು ಬುದ್ಧ, ಧಮ್ಮ ಮತ್ತು ಸಂಘದ ಅನುಸ್ಮೃತಿಗಳಿಗೆ ಮೊರೆ ಹೋದಳು. ನಂತರ ತನ್ನ ಪತಿಗೆ ಭಗವಾನರಿಗೆ ವಂದನೆಗಳನ್ನು ಸಲ್ಲಿಸುವಂತೆ ಕೇಳಿಕೊಂಡಳು. ಆತನು ಹಾಗೆಯೇ ಭಗವಾನರಿಗೆ ವಂದಿಸಿ ಆಕೆಯ ಸಂಕಷ್ಟವನ್ನು ತಿಳಿಸಿದನು. ಆಗ ಭಗವಾನರು ಹೀಗೆ ಆಶೀರ್ವದಿಸಿದರು: ಕೋಲಿಯಾದ ರಾಜಕುಮಾರಿ ಸುಪ್ಪವಾಸಳು ಆರೋಗ್ಯಕರವಾಗಿರಲಿ, ಸುಖಿಯಾಗಿರಲಿ, ಸುಖ ಪ್ರಸವದಿಂದಲೇ ಆರೋಗ್ಯಕರ ಸುಪುತ್ರನನ್ನು ಹಡೆಯಲಿ.
                ಅದೇ ಕ್ಷಣದಲ್ಲೇ ಆಕೆಗೆ ಪುತ್ರನೋರ್ವನು ಜನಿಸಿದನು. ಆತನಿಗೆ ಶಿವಾಲಿ ಎಂದು ನಾಮಕರಣ ಮಾಡಲಾಯಿತು.
                ಇದರಿಂದ ಆನಂದಿತರಾದ ಆ ದಂಪತಿಗಳು ಭಗವಾನರಿಗೆ ಮತ್ತು ಸಂಘಕ್ಕೆ ಏಳು ದಿನಗಳ ಕಾಲ ಆಹಾರ ದಾನ ಮಾಡಿದರು.
*  *  *
                ಒಂದು ಸಂದರ್ಭದಲ್ಲಿ ಭಗವಾನರಿಗೆ ಏತಕ್ಕಾಗಿ ಶಿವಾಲಿಯು ತಾಯಿಯ ಗರ್ಭದಲ್ಲಿ ಹೀಗೆ ನರಳಿದನೆಂದು ಭಿಕ್ಷುಗಳು ಕೇಳಿದ್ದಕ್ಕೆ ಭಗವಾನರು ಹೀಗೆ ಉತ್ತರಿಸಿದರು: ಭಿಕ್ಷುಗಳೇ, ಈ ಶಿವಾಲಿಯು ತನ್ನ ಹಿಂದಿನ ಜನ್ಮವೊಂದರಲ್ಲಿ ರಾಜನಾಗಿದ್ದನು. ಆಗ ತನ್ನ ರಾಜ್ಯವನ್ನು ಶತ್ರು ರಾಜನಿಂದಾಗಿ ಈತನು ಕಳೆದುಕೊಂಡಿದ್ದನು. ಅದನ್ನು ಪುನಃ ಪಡೆಯುವುದಕ್ಕಾಗಿ ತನ್ನ ತಾಯಿಯ ಸಲಹೆಯಂತೆ ನಗರವನ್ನೇ ಮುತ್ತಿಗೆ ಹಾಕಿದನು. ಇದರಿಂದಾಗಿ ನಾಗರಿಕರು ಏಳು ದಿನಗಳ ಕಾಲ ಆಹಾರ, ನೀರಿಲ್ಲದೆ ದುಃಖ ಅನುಭವಿಸಿದರು. ಅದರ ಪರಿಣಾಮವಾಗಿಯೇ ಈ ಜನ್ಮದಲ್ಲಿ ಸುಪ್ಪವಾಸ ಮತ್ತು ಶಿವಾಲಿಯು, ಗಭರ್ಾವಸ್ಥೆಯ ಹಾಗೂ ಗರ್ಭವಾಸದ ದುಃಖವನ್ನು ತಾಳಬೇಕಾಯಿತು ಎಂದರು.
*   *   *
                ಆ ಮಗು ಶಿವಾಲಿಯು ಬೆಳೆದು ದೊಡ್ಡವನಾದಾಗ ಭಿಕ್ಷುವಾಗಲು ನಿರ್ಧರಿಸಿದನು. ಆಗ ಆತನ ತಲೆಯು ಮುಂಡನವಾಗುತ್ತಿದ್ದಂತೆಯೇ ಆತನು ಅರಹಂತನಾಗಿಬಿಟ್ಟನು. ಮುಂದೆ ಆತನು ಖ್ಯಾತ ಭಿಕ್ಷುವಾದನು. ಆತನು ತನ್ನ ಹಿಂದಿನ ಜನ್ಮವೊಂದರಲ್ಲಿ ವಿಪ್ಪಸಿ ಬುದ್ಧರಿಗೆ ಹೇರಳವಾಗಿ ನೀಡಿದ್ದ ದಾನದಿಂದಾಗಿ ಮತ್ತು ಮೊಸರು ಹಾಗು ಜೇನುತುಪ್ಪದ ದಾನದ ಪರಿಣಾಮವಾಗಿ ಈ ಜನ್ಮದಲ್ಲಿ ಆತನಿಗೆ ದಾನ ಸ್ವೀಕಾರಕ್ಕೆ ಎಂದಿಗೂ ತೊಂದರೆಯಾಗಲಿಲ್ಲ. ಸ್ವಲ್ಪವೂ ಕಷ್ಟವಿಲ್ಲದೆ ಹೇರಳವಾಗಿ ದಾನ ಪಡೆದ ಭಿಕ್ಷುಗಳಲ್ಲಿ ಶಿವಾಲಿಯೇ ಅಗ್ರನಾಗಿದ್ದನು.
                ಒಮ್ಮೆ ಭಿಕ್ಷುಗಳು ಆತನು ಗಭರ್ಾವಸ್ಥೆಯಲ್ಲಿ ಪಟ್ಟಿರಬಹುದಾದ ದುಃಖವನ್ನು ಚಚರ್ಿಸುತ್ತಿರುವಾಗ ಅಲ್ಲಿ ಬಂದಂತಹ ಭಗವಾನರು ಆತನ ಬಗ್ಗೆ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment