Monday 5 October 2015

dhammapada/brahmanavagga/26.20/bhikkhunikhema

ಗಂಭೀರ ಪ್ರಾಜ್ಞನೇ ಬ್ರಾಹ್ಮಣ
ಯಾರ ಪ್ರಜ್ನೆಯು ಗಂಭೀರವಾದುದೋ,
ಯಾರು ಮೇಧಾವಿಯೋ, ಯಾರು ಲೋಕೋತ್ತರ
ಮಾರ್ಗ ಮತ್ತು ಅಮಾರ್ಗದಲ್ಲಿ ನೈಪುಣ್ಯತೆ ಸಾಧಿಸಿರುವನೋ
ಯಾರು ಉತ್ತಮೋತ್ತಮ ಗುರಿಯನ್ನು ಸಾಧಿಸಿರುವನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (403)
ಗಾಥ ಪ್ರಸಂಗ 26.20
ಭಿಕ್ಷುಣಿ ಖೇಮಾಳ ಪ್ರಶಂಸೆ

                ಭಿಕ್ಷುಣಿ ಖೇಮಾಳ ಬಗ್ಗೆ ಈಗಾಗಲೇ ಅಧ್ಯಾಯ 24ರ ಐದನೆಯ ಪ್ರಸಂಗದಲ್ಲಿ ಬಂದಿದೆ (ಗಾಥೆ 347).
                ಒಮ್ಮೆ ಭಗವಾನರು ಗೃದ್ಧಕೂಟದ ಪರ್ವತದಲ್ಲಿದ್ದರು. ರಾತ್ರಿಯ ಪ್ರಥಮ ಯಾಮ ಮುಗಿಯುತ್ತಿದ್ದಂತೆ, ಸಕ್ಕ ತನ್ನ ದೇವಗಣ ದೊಂದಿಗೆ ಭಗವಾನರನ್ನು ಭೇಟಿ ಮಾಡಲು ಬಂದನು. ಆಗ ಭಗವಾನರು ಅವರಿಗೆ ಧಮ್ಮೋಪದೇಶ ನೀಡಿದರು.
                ಆ ಸಮಯದಲ್ಲಿ ಭಿಕ್ಷುಣಿ ಖೇಮಾಳಿಗೆ ಹೀಗೆ ಅನಿಸಿತು: ನಾನು ಭಗವಾನರನ್ನು ದಶರ್ಿಸಬೇಕು. ಹೀಗಾಗಿ ತುಂಬಾ ದೂರದಲ್ಲಿದ್ದ ಆಕೆಯು ತನ್ನ ಇದ್ದಿಶಕ್ತಿ ಬಳಸಿ ಆಕಾಶ ಮಾರ್ಗದಿಂದ ಬರುತ್ತಿದ್ದಳು. ಗಾಳಿಯಲ್ಲಿಯೇ ತೇಲುತ್ತಾ ಆಕೆ ಭಗವಾನರ ಬಳಿಗೆ ಬಂದಾಗ ಅಲ್ಲಿ ಸಕ್ಕ ಮತ್ತು ದೇವಗಣ ಇದ್ದುದನ್ನು ಕಂಡು ಅಲ್ಲಿಂದಲೇ ಭಕ್ತಿಪೂರ್ವಕವಾಗಿ ವಂದಿಸಿ ಆಕೆಯು ಅಲ್ಲಿಂದ ಪುನಃ ಆಕಾಶ ಮಾರ್ಗವಾಗಿಯೇ ಹಿಂತಿರುಗಿದಳು.
                ಆಗ ಸಕ್ಕ ಭಗವಾನರಲ್ಲಿ ಹೀಗೆ ಪ್ರಶ್ನಿಸಿದನು: ಭಗವಾನ್, ಯಾರದು? ಇದ್ದಿಸಂಪನ್ನರು ಹಾಗೆಯೇ ವಂದಿಸಿ ಹಿಂತಿರುಗಿದರು.
                ಓ ದೇವೇಂದ್ರ, ಆಕೆ ನನ್ನ ಮಗಳು ಖೇಮಾ, ಪರಮಪ್ರಾಜ್ಞಳು. ಪ್ರಜ್ಞೆಯಲ್ಲಿ ಸ್ತ್ರೀಯರಲ್ಲಿಯೇ ಅಗ್ರಗಣ್ಯಳು. ಮಾರ್ಗ ಅಮಾರ್ಗದಲ್ಲಿ ಕೋವಿದಳು ಎಂದು ನುಡಿದು ಈ ಗಾಥೆಯನ್ನು ನುಡಿದರು. 

No comments:

Post a Comment