Saturday 25 April 2015

dhammapada/dandavagga/10.2/6bhikkhus

ಸರ್ವರಿಗೂ ಜೀವಿತ ಪ್ರಿಯವು
ಸರ್ವರೂ ದಂಡಕ್ಕೆ ನಡುಗುವರು,
ಸರ್ವರಿಗೂ ಜೀವಿತ ಪ್ರಿಯವಾಗಿದೆ,
ಪರರಲ್ಲಿ ತನ್ನನ್ನು ಹೋಲಿಸಿಕೊಂಡು,
ಒಬ್ಬನು ಕೊಲ್ಲದಿರಲಿ ಅಥವಾ ಹತ್ಯೆಗೆ ಕಾರಣವಾಗದಿರಲಿ.    (130)
ಗಾಥ ಪ್ರಸಂಗ 10:2
ಮರು ಜಗಳ

                ಆ ಭಿಕ್ಷುಗಳು ಕೆಲದಿನಗಳ ಕಾಲ ಸುಮ್ಮನಿದ್ದರು. ನಂತರ ಅದೇ ಕಟ್ಟಡದ ವಿಷಯದಲ್ಲಿ ಆ ಎರಡು ಗುಂಪಿನ ಮಧ್ಯೆ ಪುನಃ ಜಗಳ ಆರಂಭವಾಯಿತು. ಅವರ ದೈಹಿಕ ಹಿಂಸೆ ಕೂಡದು ಎಂಬ ನಿಯಮ ಕಡ್ಡಾಯವಾಗಿರುವುದರಿಂದಾಗಿ ಹೀಗಾಗಿ ಎರಡು ಗುಂಪುಗಳು ಹಿಂಸೆ ಮಾಡಲಿಲ್ಲ. ಆದರೂ ಈ ವೇಳೆ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಬೆದರಿಕೆ ಮತ್ತು ಹಿಂಸಾ ಭಾವಗಳ ವರ್ತನೆಯನ್ನು ಹಾವಭಾವಗಳಿಂದ ಪ್ರದಶರ್ಿಸಿತು. ಇದರಿಂದ ಭೀತಿಗೊಂಡ ಇನ್ನೊಂದು ಗುಂಪು ಅಪಾರ ಭೀತಿಗೊಂಡು ಕೂಗಿಕೊಂಡಿತು.
                ಪುನಃ ಈ ವಿಷಯ ಬುದ್ಧರ ಬಳಿಗೆ ಬಂದಿತು. ಭಗವಾನರು ಈ ಬಾರಿಯೂ ವಸತಿ ತನ್ಹಾದ ಬಗ್ಗೆ ಖಂಡಿಸಿ, ಮೈತ್ರಿಯಿಂದಿರುವಂತೆ ತಿಳಿಸಿ, ಹತ್ಯೆ ಮತ್ತು ಹಿಂಸೆ ಮಾತ್ರವಲ್ಲ, ಆ ರೀತಿಯ ಬೆದರಿಕೆಯಾಗಲಿ ಅಥವಾ ಹಿಂಸಾಭಾವಗಳ ವರ್ತನೆ ಸಹಾ ಮಾಡದಿರುವಂತೆ ವಿನಯದ ನಿಯಮವನ್ನು ಜಾರಿಗೆ ತಂದರು

No comments:

Post a Comment