Wednesday 8 April 2015

dhammapada/sahassavagga/8.9/sankicca

ದುಶ್ಶೀಲತ್ವದ ಜೀವನಕ್ಕಿಂತ ಶೀಲವಂತಿಕೆಯ ಒಂದುದಿನ ಉತ್ತಮ
ಒಬ್ಬನು ದುಶ್ಶೀಲನಾಗಿ, ಅಸಂಯಮಿಯಾಗಿ ಶತವರ್ಷ ಬಾಳಬಹುದು, ಆದರೂ ಅದಕ್ಕಿಂತ ಶೀಲವಂತನಾಗಿ, ಧ್ಯಾನಿಯಾಗಿ ಒಂದುದಿನ ಜೀವಿಸಿದರೂ ಅದು ಶ್ರೇಷ್ಠಕರವಾಗಿರುತ್ತದೆ.  (110)

ಗಾಥ ಪ್ರಸಂಗ 8:9
ಬುದ್ಧರಷ್ಟೇ ಅಲ್ಲ, ಅವರ ಶಿಷ್ಯರು ಸಹಾ ಪಾಪಿಗಳ ಚಿತ್ತಪರಿವರ್ತನೆ ಮಾಡಬಲ್ಲರು
                ಒಂದುದಿನ 30 ಭಿಕ್ಷುಗಳು ಬುದ್ಧರಿಂದ ಧ್ಯಾನದ ವಿಷಯ ಸ್ವೀಕರಿಸಿ, ಶ್ರಾವಸ್ತಿಯಿಂದ 120 ಯೋಜನ ದೂರದಲ್ಲಿರುವ ಹಳ್ಳಿಗೆ ಹೊರಟರು. ಆ ಸಮಯದಲ್ಲಿ ಡಕಾಯಿತರು ದಟ್ಟ ಅರಣ್ಯದಲ್ಲಿ ಉಳಿದಿದ್ದರು. ಅವರು ತಮ್ಮ ಕಾಡಿನ ರಕ್ಷಣಾ ದೇವಿಗೆ ನರಬಲಿ ಅಪರ್ಿಸಲು ಬಯಸಿದ್ದರು. ಆದ್ದರಿಂದಾಗಿ ಅವರು ಹಳ್ಳಿಯ ವಿಹಾರಕ್ಕೆ ಬಂದು ಒಬ್ಬ ಭಿಕ್ಷುವನ್ನು ನರಬಲಿಗೆ ನೀಡಿ ಎಂದು ಒತ್ತಾಯಿಸಿದರು. ಆಗ ಹಿರಿಯರಿಂದ, ಕಿರಿಯ ಭಿಕ್ಷುಗಳವರೆಗು ಇಚ್ಛಾಪೂರ್ವಕವಾಗಿ ಹೊರಡಲು ಸಿದ್ಧರಾದರು. ಅವರಲ್ಲಿ ಅತ್ಯಂತ ಕಿರಿಯ ಸಮಣೇರನಿದ್ದನು, ಆತನೇ ಸಂಕಿಚ್ಚ. ಆತನಿಗೆ ಜೊತೆಯಲ್ಲಿ ಸಾರಿಪುತ್ರರೇ ಕಳುಹಿಸಿಕೊಟ್ಟಿದ್ದರು. ಆತನಿಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು. ಆದರೂ ಸಹಾ ಆತನು ಆ ಕಿರಿಯ ವಯಸ್ಸಿನಲ್ಲೇ ಅರಹಂತನಾಗಿದ್ದನು. ಆತನು ನೀಡುವ ಸಮರ್ಥನೆ ಹೀಗಿತ್ತು: ಸಾರಿಪುತ್ತರು ಮುಂಬರುವ ಅಪಾಯ ಅರಿತೇ ನನ್ನನ್ನು ಕಳುಹಿಸಿದ್ದಾರೆ, ಆದ್ದರಿಂದಾಗ ಆತನೇ ಡಕಾಯಿತರ ಜೊತೆಯಲ್ಲಿ ಹೋಗಲು ಅರ್ಹ ಎಂದು ತೀಮರ್ಾನಿಸಿ, ಒಲ್ಲದ ಮನಸ್ಸಿನಿಂದ ಆತನಿಗೆ ಕಳುಹಿಸಿಕೊಟ್ಟರು.

                ಡಕಾಯಿತರು ಬಲಿಗೆ ಸಿದ್ಧತೆ ಮಾಡತೊಡಗಿದರು. ಎಲ್ಲವೂ ಸಿದ್ಧವಾದ ನಂತರ, ಅವರ ನಾಯಕನು ಮುಗ್ಧ, ಅರಹಂತ ಬಾಲಕನ ಬಳಿಗೆ ಬಂದನು. ಆ ವೇಳೆಗೆ ಆ ಬಾಲಕನು ಧ್ಯಾನದಲ್ಲಿ ತಲ್ಲೀನನಾಗಿ, ಚತುರ್ಥ ಧ್ಯಾನ ಅಥವಾ ನಿರೋಧ ಸಮಾಪತ್ತಿಯಲ್ಲಿ ಸ್ಥಿರನಾದನು. ಆಗ ಡಕಾಯಿತರ ನಾಯಕನು ಕತ್ತಿಯನ್ನು ಎತ್ತಿ ಆ ಬಾಲಕನ ಕತ್ತಿಗೆ ಬೀಸಿ ಹೊಡೆದನು. ಆದರೆ ಆಶ್ಚರ್ಯ! ಆ ಬಾಲಕನಿಗೆ ಲವಲೇಶವೂ ಹಾನಿಯಾಗದೆ ಆ ಕತ್ತಿಯೇ ತಿರುಚಿಕೊಂಡಿತು. ಆಗ ಆ ನಾಯಕನು ಮತ್ತೆ ಕತ್ತಿಯನ್ನು ನೇರಗೊಳಿಸಿ ಮತ್ತೆ ಕತ್ತಿ ಬೀಸಿ ಹೊಡೆದನು. ಈ ಬಾರಿಯೂ ಆ ಬಾಲಕನಿಗೆ ಏನೂ ಆಗದೆ ಆ ಕತ್ತಿಯ ಮೇಲ್ಭಾಗದಿಂದ ಹಿಡಿಯವರೆಗೂ ತಿರುಚಿಕೊಂಡಿತು. ಈ ಅದ್ಭುತವನ್ನು ಕಂಡು ಡಕಾಯಿತರ ನಾಯಕನು ಕತ್ತಿ ಕೆಳಗೆ ಬಿಟ್ಟು, ಆ ಬಾಲಕನ ಪಾದಗಳಿಗೆ ವಂದಿಸಿ ಕ್ಷಮೆಯಾಚಿಸಿದನು. ಅದನ್ನು ಗಮನಿಸಿದ ಎಲ್ಲಾ ಡಕಾಯಿತರು ಆಶ್ಚರ್ಯ ಮತ್ತು ಭೀತಿಯಿಂದ ಕ್ಷಮೆಯಾಚಿಸಿ, ಪಶ್ಚಾತ್ತಾಪಪಟ್ಟು ಭಿಕ್ಷುಗಳಾಗಲು ಅನುಮತಿ ಯಾಚಿಸಿ, ಭಿಕ್ಷುಗಳಾದರು. ಹೀಗೆ ಸಂಕಿಚ್ಚ ಅರಹಂತ ಸಮಣೇರರು ಅವರಲ್ಲಿ ದಶಶೀಲ ಪ್ರತಿಷ್ಠಾಪಿಸಿ, 500 ಭಿಕ್ಷುಗಳನ್ನಾಗಿಸಿ ಅವರೊಂದಿಗೆ ವಾಸಸ್ಥಳಕ್ಕೆ ಹಿಂತಿರುಗಿದರು. ನಂತರ ಎಲ್ಲರೂ ಬುದ್ಧರ ಬಳಿಗೆ ಹೋದರು. ಆಗ ಬುದ್ಧರು ಅವರಿಗೆ ಈ ರೀತಿ ಬೋಧಿಸಿದರು: ಭಿಕ್ಷುಗಳೇ, ನೀವು ಕಳ್ಳತನ ಇತ್ಯಾದಿ ಪಾಪಕರ್ಮಗಳನ್ನು ಮಾಡುತ್ತ ಜೀವಿಸಿದರೆ ನಿಮ್ಮ ಜೀವನ ವ್ಯರ್ಥವಾಗುತ್ತದೆ, ನಷ್ಟವಾಗುತ್ತದೆ. ನೀವು 100 ವರ್ಷ ಜೀವಿಸಿದರೂ ಅದು ನಿಷ್ಪ್ರಯೋಜಕವಾಗುತ್ತದೆ. ಅದರ ಬದಲು ನೀವು ಒಂದೇ ದಿನವಾಗಲಿ ಶೀಲವಂತಿಕೆಯಿಂದ ಜೀವಿಸಿದರೆ ಅದು ದುಶ್ಶೀಲತನದ ಶತವರ್ಷಗಳಿಗಿಂತಲೂ ಸವರ್ೊತ್ತಮವಾಗಿದೆ ಎಂದು ಹೇಳಿ ಮೇಲಿನ ಗಾಥೆ ನುಡಿದರು.

No comments:

Post a Comment