Wednesday 1 April 2015

dhammapada/sahassavagga/8.5/waytobrahmaloka

ಕ್ಷಣದ ಅರಹಂತ ಪೂಜೆಯು, ಶತ ವರ್ಷದ ಯಾಗಕ್ಕಿಂತ ಉತ್ತಮ
ಮಾಸ ಮಾಸಕ್ಕೂ, ಶತ ವರ್ಷಗಳ ಕಾಲ ಯಜ್ಞಯಾಗಗಳು ಮಾಡಿದರೂ, ಅದಕ್ಕೆ ಬದಲಾಗಿ ಚಿತ್ತಪೂರ್ಣತೆ ಹೊಂದಿದಂತಹ (ಅರಹಂತರ)ವರ ಕ್ಷಣ ಮುಹೂರ್ತದ ಪೂಜೆಯು ಶತ ವರ್ಷದ ಯಾಗಕ್ಕಿಂತ ಉತ್ತಮವಾದುದು.            (106)
ಗಾಥ ಪ್ರಸಂಗ 8:5
ಬ್ರಹ್ಮಲೋಕಕ್ಕೆ ಹಾದಿ

                ಪರಮಪೂಜ್ಯ ಸಾರಿಪುತ್ರರು ಒಮ್ಮೆ ತಮ್ಮ ಚಿಕ್ಕಪ್ಪನವರ ಬಳಿಗೆ ಹೋಗಿ ಅವರು ಒಂದು ಪುಣ್ಯಕಾರ್ಯವನ್ನಾದರೂ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
                ಆಗ ಅವರು ಪ್ರತಿ ಮಾಸದಲ್ಲೂ ಸಾವಿರ ಮೌಲ್ಯದ ಆಹಾರವನ್ನು ನಗ್ನ ಸನ್ಯಾಸಿಗಳಿಗೆ ನೀಡುವೆ ಎಂದರು.
                ಅದರಿಂದ ಸಿಗುವ ಪ್ರತಿಫಲವೇನು?
                ಅದೇ ಬ್ರಹ್ಮನ ಬಳಿಗೆ ಸಾಗುವ ಪಥವಾಗಿದೆ.
                ಹೀಗೆಂದು ಯಾರು ಹೇಳಿದರು ?
                ನನ್ನ ಗುರುಗಳು.
                ಓ ಬ್ರಾಹ್ಮಣ, ನೀವಾಗಲಿ ಅಥವಾ ನಿಮ್ಮ ಗುರುಗಳಾಗಲಿ ಬ್ರಹ್ಮನ ಬಳಿಗೆ ಸಾಗುವ ಮಾರ್ಗ ಅರಿತಿಲ್ಲ, ಅದನ್ನು ಬುದ್ಧರೊಬ್ಬರೇ ಅರಿತಿರುವರು. ನನ್ನೊಂದಿಗೆ ಬನ್ನಿ, ನಿಮಗೆ ಬ್ರಹ್ಮನ ಬಳಿಗೊಯ್ಯುವ ಹಾದಿ ತಿಳಿಸುತ್ತೇನೆ ಎಂದು ಬುದ್ಧರ ಬಳಿಗೆ ಬಂದಾಗ ಭಗವಾನರು ಅರಹಂತರಿಗೆ ಅಥವಾ ಅರಹಂತ ಮಾರ್ಗದಲ್ಲಿರುವ ತಮ್ಮ ಶಿಷ್ಯರಿಗೆ ನೀಡುವ ಚಮಚದ ಆಹಾರವು, ಈ ರೀತಿ ನಗ್ನ ಸನ್ಯಾಸಿಗಳಿಗೆ ಶತ ವರ್ಷ ನೀಡಿದರೂ, ಅದು ಸಮನಾಗಲಾರದು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.



No comments:

Post a Comment