Thursday 16 April 2015

dhammapada/papavagga/9.1/cullaekasataka

 ಪಾಪವಗ್ಗ

ಪುಣ್ಯ ಮಾಡಲು ಆಲಸ್ಯ ಬೇಡ
ಒಳ್ಳೆಯದನ್ನು ಮಾಡಲು ಆತುರನಾಗು, ಆದರೆ ಪಾಪಚಿತ್ತವನ್ನು ಗಮನಿಸುತ್ತ ತಡೆ, ಯಾರು ಪುಣ್ಯ ಮಾಡಲು ಆಲಸಿಯಾಗುವನೋ, ಆತನ ಮನಸ್ಸು ಪಾಪದಲ್ಲಿ ರಮಿಸುವುದು.      (116)
ಗಾಥ ಪ್ರಸಂಗ 9:1
ಬಡ ಬ್ರಾಹ್ಮಣ ಚುಲ್ಲ ಏಕಸಾತಕನ ಮಹಾದಾನ

                ಶ್ರಾವಸ್ತಿಯಲ್ಲಿ ಬ್ರಾಹ್ಮಣ ದಂಪತಿಗಳಿದ್ದರು. ಆದರೆ ಅವರಿಗೆ ಮೇಲ್ವಸ್ತ್ರವು ಒಂದೇ ಇತ್ತು. (ಶಾಲಿನಂತೆ ದೇಹದ ಮೇಲ್ಭಾಗದಲ್ಲಿ ಧರಿಸುವಂತಹುದು). ಹೀಗಾಗಿ ಅವರು ಎಂದೂ ಹೊರಗಡೆ ಜೊತೆಯಲ್ಲಿ ಹೋಗುತ್ತಿರಲಿಲ್ಲ. ಧಮ್ಮ ಶ್ರವಣಕ್ಕೂ ಸಹಾ ಪತ್ನಿಯು ಹಗಲಿನಲ್ಲಿ ಬುದ್ಧವಚನ ಕೇಳಲು ಹೋದರೆ, ಪತಿಯು ರಾತ್ರಿಗೆ ಹೋಗುತ್ತಿದ್ದನು. ಒಂದು ರಾತ್ರಿ ಬ್ರಾಹ್ಮಣನು ಬುದ್ಧರ ವಚನ ಆಲಿಸುತ್ತಿದಾಗ ಆತನ ಇಡೀ ಶರೀರ ಮತ್ತು ಮನವೆಲ್ಲಾ ದಾನ ಮಾಡಲು ಇಚ್ಚುಕನಾಗಿ ಆನಂದಭರಿತನಾದನು. ಆಗ ಆತನು ಮೇಲ್ವಸ್ತ್ರವನ್ನು ದಾನಮಾಡಲು ಇಷ್ಟಪಟ್ಟನು. ಆದರೆ ತನಗೂ ಮತ್ತು ತನ್ನ ಪತ್ನಿಗೂ ಇರುವುದೊಂದೇ ಮೇಲ್ವಸ್ತ್ರ ಎಂದು ಯೋಚಿಸಿ ದ್ವಂದ್ವ ತಾಳಿದನು. ಹಿಂದು-ಮುಂದು ಯೋಚಿಸಿದನು. ಹೀಗೆಯೇ ರಾತ್ರಿಯ ಪ್ರಥಮಯಾಮ, ದ್ವಿತೀಯ ಯಾಮಗಳು ಕಳೆದವು. ಮೂರನೆಯ ಯಾಮದಲ್ಲಿ (ಸುಮಾರು ರಾತ್ರಿ 2 ಗಂಟೆ) ಆತನು ತನ್ನಲ್ಲಿ ತಾನೇ ಹೀಗೆ ಹೇಳಿಕೊಂಡನು: ನಾನು ತುಂಬಾ ಲೋಭಿ ಮತ್ತು ಆಲಸಿಯಾಗಿದ್ದೇನೆ, ನಾನು ದುಃಖದಿಂದ ಪಾರಾಗುವ ಅತ್ಯುತ್ತಮ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ಖಂಡಿತವಾಗಿ ನನ್ನ ಬಾಹ್ಯ ವಸ್ತ್ರವನ್ನು ಬುದ್ಧರಿಗೆ ಅಪರ್ಿಸುತ್ತೇನೆ. ಹೀಗೆ ಹೇಳಿಕೊಳ್ಳುತ್ತ, ಆತನು ತನ್ನ ಬಾಹ್ಯ ಮೇಲ್ವಸ್ತ್ರವನ್ನು ಬುದ್ಧರ ಪಾದಕ್ಕೆ ಸಮಪರ್ಿಸಿದನು. ನಂತರ ಆನಂದಭರಿತನಾಗಿ ನಾನು ಗೆದ್ದೆ ಎಂದು ಮೂರುಬಾರಿ ಕೂಗಿದನು. ಆಗ ಅಲ್ಲಿಯೇ ಕುಳಿತಿದ್ದಂತಹ ರಾಜ ಪಸೇನದಿಯು ಇದನ್ನು ಕೇಳಿ ಕುತೂಹಲಭರಿತನಾಗಿ, ತನ್ನ ಸೇವಕರನ್ನು ಪರಿಶೀಲನೆ ಮಾಡಲು ಕಳುಹಿಸಿದನು. ನಂತರ ರಾಜನಿಗೆ ಆ ಬ್ರಾಹ್ಮಣನ ದಾನ ಸಾಮಾನ್ಯವಾದುದಲ್ಲ ಎಂದೆನಿಸಿ, ಆತನಿಗೆ ಸನ್ಮಾನಿಸಬೇಕೆಂದು ಆತನಿಗೆ ವಸ್ತ್ರವೊಂದನ್ನು ದಾನ ಮಾಡಿದನು. ಆದರೆ ಬ್ರಾಹ್ಣನು ಅದನ್ನು ಬುದ್ಧರಿಗೆ ಅಪರ್ಿಸಿದನು. ನಂತರ ರಾಜನು ಬ್ರಾಹ್ಮಣನಿಗೆ ಎರಡು ವಸ್ತ್ರಗಳನ್ನು ನೀಡಿದನು, ಬ್ರಾಹ್ಮಣನು ಅದನ್ನು ಬುದ್ಧರಿಗೆ ಸಮಪರ್ಿಸಿದನು, ನಂತರ ರಾಜನು ನಾಲ್ಕು ವಸ್ತ್ರಗಳನ್ನು ನೀಡಿದರೆ ಅದೆಲ್ಲವನ್ನೂ ಆತನು ಬುದ್ಧರಿಗೆ ನೀಡಿದನು. ಹೀಗೆಯೇ ದ್ವಿಗುಣಗೊಳಿಸುತ್ತ ರಾಜನು 32 ವಸ್ತ್ರಗಳನ್ನು ನೀಡಿದನು. ಆಗ ಬ್ರಾಹ್ಮಣನು ಒಂದು ತನಗಾಗಿ ಮತ್ತು ಒಂದು ತನ್ನ ಪತ್ನಿಗಾಗಿ ಇರಿಸಿ ಉಳಿದ 30 ವಸ್ತ್ರಗಳನ್ನು ಆತನು ಬುದ್ಧರಿಗೆ ಸಮಪರ್ಿಸಿದನು.
                ಆಗ ರಾಜನಿಗೆ ಆ ಬ್ರಾಹ್ಮಣನ ಮೇಲೆ ಅತಿ ಗೌರವವುಂಟಾಗಿ ಆತನಿಗೆ ರಾಜಯೋಗ್ಯ ಸನ್ಮಾನ ನೀಡಬೇಕೆಂದು ನಿರ್ಧರಿಸಿ, ಆ ಬ್ರಾಹ್ಮಣನಿಗೆ ಎರಡು ಮಖಮಲ್ಲಿನ (ನುಣುಪಾದ ಶ್ರೇಷ್ಠ ರೇಷ್ಮೆ) ಅಮೂಲ್ಯ ವಸ್ತ್ರಗಳನ್ನು ನೀಡಿದನು. ಆಗ ಬ್ರಾಹ್ಮಣನು ಒಂದನ್ನು ಬುದ್ಧರು ಮಲಗುವ ಗಂಧಕೂಟಿಯಲ್ಲಿ ಸಮಪರ್ಿಸಿದನು (ಇಟ್ಟನು). ಮತ್ತೊಂದನ್ನು ತಮ್ಮ ಮನೆಯಲ್ಲಿ ಆಹಾರ ಸೇವಿಸಲು ಕುಳಿತುಕೊಳ್ಳುವ ಭಿಕ್ಷುಗಳ ಆಸನದ ಮೇಲೆ ಹಾಕಿದನು. ಮಾರನೆಯದಿನ ರಾಜನು ಬುದ್ಧರನ್ನು ಕಾಣಲು ಹೋದಾಗ ಆತನಿಗೆ ಆ ವಸ್ತ್ರವು ಕಾಣಿಸಿದಾಗ ಆತನಿಗೆ ಅಪಾರ ಆನಂದವಾಯಿತು. ಆತನು ಆ ಬ್ರಾಹ್ಮಣನಿಗೆ ನಾಲ್ಕು ಆನೆ, ನಾಲ್ಕು ಕುದುರೆ, ನಾಲ್ಕು ದಾಸ, ನಾಲ್ಕು ದಾಸಿ, ನಾಲ್ಕು ಸಂದೇಶವಾಹಕ ಆಳುಗಳು, ನಾಲ್ಕು ಹಳ್ಳಿಗಳು ಮತ್ತು ನಾಲ್ಕುಸಾವಿರ ವರಹಗಳನ್ನು ನೀಡಿ ಗೌರವಿಸಿದನು.

                ಭಿಕ್ಷುಗಳಿಗೆ ಈ ವಿಷಯ ತಿಳಿದು ಭಗವಾನರಿಗೆ ಈ ರೀತಿ ಪ್ರಶ್ನಿಸಿದರು: ಭಂತೆ, ಕುಶಲ ಕರ್ಮಗಳು ವರ್ತಮನದಲ್ಲಿಯೇ ಈ ರೀತಿ ಫಲ ನೀಡುತ್ತವೆಯೇ? ಆಗ ಭಗವಾನರು ಹೀಗೆ ಉತ್ತರಿಸಿದರು: ಓ ಭಿಕ್ಷುಗಳೇ, ಆ ಬ್ರಾಹ್ಮಣನು ಪ್ರಥಮ ಯಾಮದಲ್ಲೇ ದಾನ ನೀಡಿದ್ದರೆ ಆತನಿಗೆ ಎಲ್ಲವೂ ನಾಲ್ಕರ ಬದಲು ಹದಿನಾರು ಸಿಗುತ್ತಿತ್ತು. ಅಥವಾ ಆತನು ದ್ವಿತೀಯ ಯಾಮದಲ್ಲಿ ದಾನ ನೀಡಿದ್ದರೆ ಆತನಿಗೆ ಎಂಟು ಸಿಗುತ್ತಿತ್ತು. ಆತನು ತೃತೀಯ ಯಾಮದಲ್ಲಿ ದಾನ ನೀಡಿದ್ದರಿಂದಾಗಿ ಆತನಗೆ ನಾಲ್ಕು ಆನೆ, ನಾಲ್ಕು ಕುದುರೆ, ನಾಲ್ಕು ದಾಸ, ನಾಲ್ಕು ದಾಸಿ, ನಾಲ್ಕು ಸಂದೇಶವಾಹಕ ಆಳುಗಳು, ನಾಲ್ಕು ಹಳ್ಳಿಗಳು ಮತ್ತು ನಾಲ್ಕುಸಾವಿರ ವರಹಗಳು ಸಿಕ್ಕಿವೆ. ಆದ್ದರಿಂದಾಗಿ ದಾನದಲ್ಲಿ ನಿದಾನ ಇರಬಾರದು ಎಂದು ಹೇಳಿ ಮೇಲಿನ ಗಾಥೆ ನುಡಿದರು.

No comments:

Post a Comment