Friday 17 April 2015

dhammapada/papavagga/9.4/anathapindika

ಪರಿಣಾಮದಿಂದಲೇ ಪಾಪ ಮತ್ತು ಪುಣ್ಯದ ಗೋಚರಿಸುವಿಕೆ
ಎಲ್ಲಿಯವರೆಗೆ ಪಾಪಕರ್ಮವು ಫಲವನ್ನು ನೀಡುವುದಿಲ್ಲವೋ, ಪಾಪಿಯು ಅಲ್ಲಿಯವರೆಗೆ ಸುಖವಾಗಿಯೇ ಇರುವನು. ಆದರೆ ಯಾವಾಗ ಪಾಪಕೃತ್ಯವು ಫಲನೀಡುವುದೋ ಆಗ ಪಾಪಿಯು ಪಾಪದ ಕುಪರಿಣಾಮಗಳನ್ನು ಪಡೆಯುತ್ತಾನೆ. (119)
ಎಲ್ಲಿಯವರೆಗೆ ಪುಣ್ಯಕರ್ಮವು ಫಲ ನೀಡುವುದಿಲ್ಲವೋ ಅಲ್ಲಿಯವರೆಗೆ ಪುಣ್ಯವಂತನು ದುಃಖವನ್ನು ಅಲ್ಪಸ್ವಲ್ಪ ಪಡೆಯಬಹುದು. ಆದರೆ ಯಾವಾಗ ಪುಣ್ಯಫಲವು ಫಲ ನೀಡುವುದೋ ಆಗ ಪುಣ್ಯಶಾಲಿಯು ಪುಣ್ಯಗಳ ಸುಪರಿಣಾಮಗಳನ್ನು ಪಡೆಯುತ್ತಾನೆ.           (120)
ಗಾಥ ಪ್ರಸಂಗ 9:4
ಅನಾಥಪಿಂಡಿಕನ ಪ್ರಸಂಗ
                ಅನಾಥಪಿಂಡಿಕನು ಹೆಸರಿಗೆ ತಕ್ಕಂತೆ ಅನಾಥರಿಗೆ ಪಿಂಡ (ಆಹಾರ)ವನ್ನು ಇಟ್ಟು ಅನಾಥರಕ್ಷಕನಾಗಿದ್ದನು. ಆತನ ನಿಜ ಹೆಸರು ಸುದತ್ತ ಎಂಬುದಾಗಿತ್ತು. ಆದರೂ ಆತನು ತನ್ನ ದಾನ ಪ್ರವೃತ್ತಿಯಿಂದಾಗಿ ಅನಾಥಪಿಂಡಿಕ ಎಂದು ಖ್ಯಾತಿ ಗಳಿಸಿದನು. ಒಮ್ಮೆ ಆತನು ತನ್ನ ಭಾವನ ಮನೆಗೆ ಹೋದಾಗ, ಆತನು ಬುದ್ಧರ ಆಗಮನಕ್ಕಾಗಿ ಸಿದ್ಧತೆ ನಡೆಸುತ್ತಿದ್ದನು. ಹೀಗಾಗಿ ಅನಾಥಪಿಂಡಿಕನಿಗೆ ಲೆಕ್ಕಿಸಲೇ ಇಲ್ಲ. ಇದರಿಂದಾಗಿ ಆಶ್ಚರ್ಯಗೊಂಡ ಅನಾಥಪಿಂಡಿಕನು ಬಾವನಿಗೆ ನಾಳೆ ಯಾರಾದರೂ ಬರುವರೇ? ಎಂದು ಪ್ರಶ್ನಿಸಿದಾಗ ಆತನು ಬುದ್ಧ ಭಗವಾನರು ಬರುವರೆಂದನು. ಬುದ್ಧ ಈ ಪದವನ್ನು ಆಲಿಸುತ್ತಲೇ ಅನಾಥಪಿಂಡಿಕನ ಶರೀರ ಮತ್ತು ಮನಸ್ಸು ಆನಂದಭರಿತವಾಯಿತು, ರೋಮಾಂಚನ ವಾಯಿತು, ಆನಂದವು ಪ್ರವಾಹದಂತೆ ಅಸ್ತಿತ್ವದಲ್ಲೇ ಹರಿದಾಡುತ್ತಿತ್ತು. ಆತನು ಬುದ್ಧರನ್ನು ಭೇಟಿ ಮಾಡಿ ಅವರ ಅಮೂಲ್ಯತೆಯನ್ನು ಅರಿತನು. ಅಂದಿನಿಂದ ಆತನು ಭಗವಾನರನ್ನು ಮತ್ತು ಭಿಕ್ಷುಗಳನ್ನು ಪ್ರತಿನಿತ್ಯ ಆಹಾರಕ್ಕೆ ಆಹ್ವಾನಿಸುತ್ತಿದ್ದನು. ಆತನು ಪ್ರತಿದಿನ ನೂರಾರು ಭಿಕ್ಷುಗಳಿಗೆ ದಾನ ಮಾಡುತ್ತಿದ್ದನು. ಅದಕ್ಕಾಗಿಯೇ ಏಳು ಅಂತಸ್ತಿನ ಕಟ್ಟಡವನ್ನು ಕಟ್ಟಿಸಿದನು.
                ಆತನ ದಾನ ಹೃದಯವು ವಿಕಸಿತವಾಗಿ ಆತನು ಭಿಕ್ಷುಗಳಿಗಾಗಿ ವಿಹಾರವನ್ನು ಕಟ್ಟಿಸಲು ಸಿದ್ಧನಾದನು. ಅದಕ್ಕಾಗಿ ರಮಣೀಯ ಸ್ಥಳವನ್ನು ಆಯ್ಕೆ ಮಾಡಿದನು. ಆ ಸ್ಥಳವು ಪಸೇನದಿಯ ಕುಮಾರನಾದ ರಾಜಕುಮಾರ ಜೇತನಿಗೆ ಸೇರಿದುದಾಗಿತ್ತು. ಜೇತನಿಗೆ ಆ ಭೂಮಿಯನ್ನು ಮಾರುವೆಯಾ ಎಂದು ಕೇಳಿದಾಗ ಆತನು ನಿಂತ ನಿಲುವೆ 18 ದಶಲಕ್ಷ ಕೋಟಿ ಕೇಳಿದನು. ಅಥವಾ ಜೇತವನದುದ್ದಕ್ಕೂ ಚಿನ್ನದ ನಾಣ್ಯವನ್ನು ಹಾಸಿದರೆ ಆ ಭೂಮಿಯನ್ನು ನೀಡುವುದಾಗಿ ಜೇತನು ಹೇಳಿದನು. ಅದಕ್ಕೆ ಸಿದ್ಧನಾದ ಅನಾಥಪಿಂಡಿಕನು ಬಂಡಿ-ಬಂಡಿಗಳನ್ನು ಚಿನ್ನದ ನಾಣ್ಯಗಳನ್ನು ತುಂಬಿಸಿಕೊಂಡು ಆ ನಾಣ್ಯಗಳಿಂದಲೇ ಜೇತವನವನ್ನು ಹಾಸಿದನು. ಆದರೂ 18 ದಶಲಕ್ಷ ಕೋಟಿ ಸಾಕಾಗದೆ ತುಂಡು ಭೂಮಿ ಬರಿದಾಗಿಯೇ ಇತ್ತು. ಅದನ್ನು ಚಿನ್ನದ ನಾಣ್ಯಗಳಿಂದ ಹಾಸಲು ಹೋದಾಗ ಸ್ವತಃ ಜೇತನೇ ತಡೆದು, ಆ ಸ್ಥಳವು ತನ್ನ ಕಾಣಿಕೆಯಾಗಿ ಭಿಕ್ಖು ಸಂಘಕ್ಕಿರಲಿ ಎಂದನು. ಆನಂತರ ಅನಾಥಪಿಂಡಿಕನು ಮತ್ತೆ 18 ದಶಲಕ್ಷ ಕೋಟಿ ಖಚರ್ು ಮಾಡಿ ಭವ್ಯವಾದ ಭಿಕ್ಷು ಆರಾಮ ವಿಹಾರವನ್ನು ಕಟ್ಟಿಸಿದನು. ಭಿಕ್ಷುಗಳು ನೆಲೆಸಲು ಸರ್ವರೀತಿಯಲ್ಲೂ ಸೌಕರ್ಯದಿಂದ ಕೂಡಿದ ಆರಾಮ ಅದಾಯಿತು. ನಂತರ ಅನಾಥಪಿಂಡಿಕನು ಪ್ರತಿನಿತ್ಯವೂ ಮಧ್ಯಾಹ್ನಕ್ಕೆ ಮುಂಚೆ ಆಹಾರ ದಾನವನ್ನು ಮತ್ತು ಸಂಜೆ ಚೀವರ, ಔಷಧಿ ಮತ್ತಿತರ ಪರಿಕರಗಳನ್ನು ಭಿಕ್ಷುಗಳಿಗೆ ದಾನವಾಗಿ ನೀಡುತ್ತಿದ್ದನು. ಅದರ ಖಚರ್ು ಸಹಾ 18 ದಶಲಕ್ಷ ಕೋಟಿಯವರೆಗೂ ಖಚರ್ು ಮಾಡಿ ದಾನ ಮಾಡುತ್ತಿದ್ದನು. ಆತನ ಒಟ್ಟು ಆಸ್ತಿ 90 ದಶಲಕ್ಷ ಕೋಟಿಯಾಗಿತ್ತು. ಆತನು ಸಾಲವಾಗಿ ವ್ಯಾಪಾರಿಗಳಿಗೆ 18 ದಶಲಕ್ಷ ಕೋಟಿ ನೀಡಿದ್ದನು. ಆದರೆ ಅವರು ಹಿಂತಿರುಗಿಸಲಿಲ್ಲ. ಒಮ್ಮೆ ಪ್ರವಾಹದ ಕಾರಣದಿಂದಾಗಿ ಆತನ 18 ದಶಲಕ್ಷ ಕೋಟಿಯು ಸಮುದ್ರಕ್ಕೆ ಸೇರಿತು. ಆದರೂ ಆತನು ಧೃತಿಗೆಡದೆ ದಾನವನ್ನು ಮಾಡುತ್ತಲೇ ಇದ್ದನು.
                ಒಮ್ಮೆ ಆತನ ಮನೆಯಲ್ಲಿದ್ದ ದೇವತೆಯು ಆತನ ಮುಂದೆ ಪ್ರತ್ಯಕ್ಷಳಾದಳು. ನಂತರ ಹೀಗೆ ಹೇಳಿದಳು: ನಾನು ನಿನ್ನ ಮನೆಯಲ್ಲಿ ವಾಸವಾಗಿರುವ ನಿನ್ನ ಹಿತೈಷಿ ದೇವತೆಯಾಗಿರುವೆನು. ನೀನು ಬುದ್ಧರಿಗೆ ದಾನ ಮಾಡಿ ಮಾಡಿಯೇ ಹೀಗೆ ಬಡವನಾಗಿದ್ದೀಯೇ. ನಿನ್ನ ಭವಿಷ್ಯದ ಬಗ್ಗೆಯೇ ಯೋಚಿಸದೆ ಹೀಗೆ ದಾನಮಾಡಿ ಹೀಗಾಗಿದ್ದೀಯೇ. ಆದ್ದರಿಂದಲೇ ನೀನು ಬಡವನಾಗಿದ್ದೀಯೇ, ಆದ್ದರಿಂದ ಇಂದಿನಿಂದ ದಾನಾದಿ ಕಾರ್ಯ ನಿಲ್ಲಿಸಿ, ವ್ಯವಹಾರದತ್ತ ಹೆಚ್ಚು ಮನಸ್ಸನ್ನು ನೀಡು. ನೀನು ಮತ್ತೆ ಶ್ರೀಮಂತನಾಗುವೆ.
                ಆಗ ಅನಾಥಪಿಂಡಿಕನು ಹೀಗೆ ಹೇಳಿದನು: ಓ ದೇವತೆಯೇ, ನಿನ್ನ ಹಿತನುಡಿಗೆ ಧನ್ಯವಾದಗಳು. ಆದರೆ ನಿನಗೆ ತ್ರಿರತ್ನದ ಮೌಲ್ಯ ಗೊತ್ತಿಲ್ಲ. ಆದರೆ ನನಗೆ ತಿಳಿದಿದೆ. ನಾನು ಹೇಳುತ್ತೇನೆ ಕೇಳು, ಈ ಲೋಕದಲ್ಲಿ ಮೂರೇ ಐಶ್ವರ್ಯಗಳಿವೆ, ಅವೆಂದರೆ: ಬುದ್ಧ, ಧಮ್ಮ ಮತ್ತು ಸಂಘ. ಇದಕ್ಕೆ ಮಿಗಿಲಾದ ಐಶ್ವರ್ಯವಿಲ್ಲ. ಆದ್ದರಿಂದಾಗಿ ಇಂತಹ ಉಪದೇಶ ನನಗೆ ನೀಡದಿರು.
                ಆಗಲೂ ಆ ದೇವತೆಯು ಪುನಃ ಪುನಃ ಅದೇ ಉಪದೇಶ ನೀಡಿದಾಗ, ಅನಾಥಪಿಂಡಿಕನು ಹೀಗೆ ಆಜ್ಞಾಪಿಸಿದನು: ನನಗೆ ದುಬರ್ೊಧನೆ ನೀಡಿದ ಸಲುವಾಗಿ, ನೀನು ಇಲ್ಲಿರಬಾರದು, ನನ್ನಂತಹ ತ್ರಿರತ್ನದ ಆರಾಧಕನಿಗೆ ಮನೆಯಲ್ಲಿ ಶ್ರದ್ಧಾರಹಿತಳಾದ ನೀನು ಇರಬಾರದು ನಡೆ ಇಲ್ಲಿಂದ.
                ಆ ದೇವತೆಗೆ ಆ ಕ್ಷಣದಿಂದಲೇ ಆ ಮನೆಯ ಒಳಗೆ ಇರಲಾಗಲಿಲ್ಲ. ಏಕೆಂದರೆ ಸೋತಾಪತ್ತಿ ಪಡೆದ ಪುಣ್ಯಶಾಲಿಯ ಇಚ್ಛೆಯಂತೆ ಎಲ್ಲವೂ ನಡೆಯುವುದು. ಆಕೆಗೆ ಆಶ್ರಯ ತಪ್ಪಿತು. ಆ ಮನೆಯಂತೆ ಇನ್ನೊಂದು ಆಶ್ರಯವು ಆಕೆಗೆ ಸಿಗದಾಯಿತು. ಆಕೆಯು ಶ್ರಾವಸ್ತಿಯ ನಗರ ದೇವತೆಯ ಬಳಿಗೆ ವಿಷಯ ತಿಳಿಸಿದಳು. ಅಲ್ಲೂ ಫಲ ಸಿಗಲಿಲ್ಲ. ಕೊನೆಗೆ ಆಕೆಯು ದೇವೇಂದ್ರ ಸಕ್ಕನ ಬಳಿಗೆ ಬಂದು ವಿಷಯವೆಲ್ಲಾ ತಿಳಿಸಿದಳು. ಆಗ ದೇವೇಂದ್ರನು ಸಹಾ ಆಕೆಗೆ ನಿಂದಿಸಿ, ಜೊತೆಗೆ ಪರಿಹಾರ ಉಪಾಯವೊಂದನ್ನು ತಿಳಿಸಿದನು.
                ಅದರಂತೆಯೇ ಆಕೆಯು ಸಮುದ್ರದಲ್ಲಿ ಮುಳುಗಿದ ಐಶ್ವರ್ಯವನ್ನು ಅನಾಥಪಿಂಡಿಕನಿಗೆ ಮರಳಿಸಿದಳು ಮತ್ತು ಕ್ಷಮೆ ಯಾಚಿಸಿದಳು. ನಂತರ ಬುದ್ಧರ ಬಳಿಯೂ ಕ್ಷಮೆ ಯಾಚಿಸಿದಳು. ಅನಾಥಪಿಂಡಿಕನ ಪೂವರ್ಿಕರು ಭೂಮಿಯಲ್ಲಿ ಅಡಗಿಸಿದ್ದ ನಿಧಿಯನ್ನು ತೋರಿಸಿದಳು. ಹಾಗು ಸಾಲ ಪಡೆದು ಸುಮ್ಮನಿದ್ದ ವ್ಯಾಪಾರಿಗಳನ್ನು ಕನಸಿನಲ್ಲಿ ಪೀಡಿಸಿ ಸಾಲ ಹಿಂದಿರುಗಿಸುವಂತೆ ಮಾಡಿದಳು. ಹೀಗಾಗಿ ಅನಾಥಪಿಂಡಿಕನು ಪುನಃ 90 ದಶಲಕ್ಷ ಕೋಟಿಯಷ್ಟು ಶ್ರೀಮಂತನಾದನು. ಆಕೆಗೂ ಆಶ್ರಯ ಸಿಕ್ಕಿತು.
                ಆಗ ಭಗವಾನರು ಹೀಗೆ ನುಡಿದರು: ಯಾರು ದಾನದ ಪರಿಪೂರ್ಣತೆಗಾಗಿ ಶ್ರಮಿಸುತ್ತಿರುವರೋ ಅಂತಹವರಿಗೆ ಈ ಜಗತ್ತಿನ ಯಾವ ಶಕ್ತಿಯೂ ತಡೆ ಹಾಕಲಾರದು. ಯಾವ ಪ್ರೇತಗಳಾಗಲಿ ದೇವತೆಗಳಾಗಲಿ, ಮಾರನಾಗಲಿ ಅಥವಾ ಮೃತ್ಯುವೇ ಆಗಲಿ ತಡೆಹಾಕಲು ಸಾಧ್ಯವಿಲ್ಲ.
                ಆದರೆ ಅನಾಥಪಿಂಡಿಕನ ಮಗನಾದ ಕಾಲನು ಬುದ್ಧ ಭಗವಾನರಿಂದ ಮತ್ತು ಭಿಕ್ಷುಗಳಿಂದ ದೂರವೇ ಇದ್ದನು. ಹೀಗೆ ಆದರೆ ಭವಿಷ್ಯದಲ್ಲಿ ಮಗನಿಗೆ ಹಿತವಿರಲಾರದೆಂದು ಅನಾಥಪಿಂಡಿಕನು ಮಗನನ್ನು ಸರಿದಾರಿಗೆ ತರಲೆಂದು ಉಪಾಯವೊಂದನ್ನು ಮಾಡಿದನು. ಅದೇನೆಂದರೆ ಒಂದುದಿನ ಶೀಲ ಪಾಲಿಸಿದರೆ ನೂರು ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು. ಅದನ್ನು ಆತನು ಪಾಲಿಸಿದ ನಂತರ, ಒಂದು ಗಾಥೆಯನ್ನು ನೆನಪಿನಲ್ಲಿಟ್ಟುಕೊಂಡು ಬಂದು ಹೇಳಿದರೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು.
                ಹೀಗಾಗಿ ಆ ಯುವಕನು ಧಮ್ಮವನ್ನು ಆಲಿಸಲು ಬುದ್ಧ ಭಗವಾನರ ಬಳಿಗೆ ಬಂದನು. ಆದರೆ ಧಮ್ಮವನ್ನು ಅರಿಯುವ ಬದಲು ಕೇವಲ ಒಂದು ಗಾಥೆಯನ್ನು ನೆನಪಿನಲ್ಲಿಡಲು ಪ್ರಯತ್ನಿಸುತ್ತಿದ್ದನು. ಹೀಗಾಗಿ ಆ ಯುವಕನು ಒಂದೇ ಗಾಥೆಯನ್ನು ಹಲವುಬಾರಿ ಪುನರುಚ್ಛಾರ ಮಾಡುತ್ತಲೇ ಧಮ್ಮದ ಅರ್ಥವನ್ನು ಪೂರ್ಣವಾಗಿ ಗ್ರಹಿಸಿ ಸೋತಾಪತ್ತಿ ಫಲವನ್ನು ಪಡೆದನು. ನಂತರ ಮಾರನೆಯದಿನ ಭಗವಾನರಿಗೆ ಮತ್ತು ಭಿಕ್ಖುಗಳಿಗೆ ದಾನಕ್ಕೂ ಮನೆಗೆ ಆಹ್ವಾನಿಸಿದನು. ಆ ಸಂದರ್ಭದಲ್ಲಿ ಅನಾಥಪಿಂಡಿಕನು ಸಾವಿರ ಚಿನ್ನದ ನಾಣ್ಯಗಳನ್ನು ಕಾಲನಿಗೆ ನೀಡಲು ಹೋದಾಗ ಆತನು ಸ್ವೀಕರಿಸಲು ನಿರಾಕರಿಸಿದನು. ಆಗ ಅನಾಥಪಿಂಡಿಕನು ಭಗವಾನರಲ್ಲಿ ಹೀಗೆ ಹೇಳಿದನು: ಭಗವಾನ್  ನನ್ನ ಮಗ ಈಗ ಬದಲಾಗಿದ್ದಾನೆ, ಆತನು ಆರ್ಯರಂತೆ ವತರ್ಿಸುತ್ತಿದ್ದಾನೆ. ಆಗ ಭಗವಾನರು ಕಾಲನು ಸೋತಪನ್ನನಾಗಿರುವುದನ್ನು ಹೇಳಿ ಈ ಗಾಥೆ ನುಡಿದರು

No comments:

Post a Comment