Saturday 25 April 2015

dhammapada/dandavagga/10.7/moggalana

ನಿರಪರಾಧಿ ಮುಗ್ಧರಿಗೆ ಹಿಂಸಿಸುವವನು ಘೋರ ದುಃಖಕ್ಕೆ ಗುರಿಯಾಗುತ್ತಾನೆ
ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ.   (137)
ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ
ಹುಟ್ಟುತ್ತಾನೆ.         (138, 139, 140)
ಗಾಥ ಪ್ರಸಂಗ 10:7
ಪರಮಪೂಜ್ಯ ಮೊಗ್ಗಲ್ಲಾನರವರ ದುರಂತ




                ಕೋಲಿತ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ಸ್ತ್ರೀಯಾದ ಮೊಗ್ಗಲಿ ಎಂಬಾಕೆಯು ಪುತ್ರನಿಗೆ ಜನ್ಮವಿತ್ತಳು. ಆ ಮಗುವೇ ಮೊಗ್ಗಲಿಪುತ್ರ ಅಥವಾ ಮೊಗ್ಗಲಿಪುತ್ತ. ಆತನಿಗೆ ಇರುವ ಇನ್ನೊಂದು ಹೆಸರು ಕೋಲಿತ, ಅಂದರೆ ತನ್ನ ಹಳ್ಳಿಯ ಹೆಸರೇ ಆಗಿತ್ತು.
                ಈತನಿಗೆ ಇದ್ದ ಏಕೈಕ ಪ್ರಾಣ ಸ್ನೇಹಿತನೇ ಸಾರಿಪುತ್ತ ಅಥವಾ ಉಪತಿಸ್ಸ. ಒಂದುದಿನ ಅವರಿಬ್ಬರು ಬೆಟ್ಟದ ಮೇಲಿನ ಹಬ್ಬಕ್ಕೆ ಹೊರಟರು. ಅಲ್ಲಿ ಗಾನ, ಸಂಗೀತ, ನೃತ್ಯ, ನಾಟಕ ಇತ್ಯಾದಿಗಳಿಂದ ಕೂಡಿದ್ದ ಸುಖ ಭೋಗಗಳು ಹೇರಳವಾಗಿದ್ದವು. ಆದರೆ ಅವರಿಗೆ ಅತಿಯಾದ ಸುಖ ಸಹಿಸಲಾರದೆ, ಇಂದ್ರಿಯ ಸುಖದ ಆಚೆಯ ಸುಖಗಳಾದ ಸಮಾಧಿ ಮತ್ತು ವಿಮುಕ್ತಿಯನ್ನು ಅರಸಲು ಅವರು ಹೊರಟರು. (ಅದೇ ಸಮಯದಲ್ಲಿ ಸಿದ್ಧಾರ್ಥ ಬೋಧಿಸತ್ವರು ಯಸೋಧರೆಯನ್ನು ವಿವಾಹವಾಗಿದ್ದರು).
                ಇವರೀರ್ವರ ತ್ಯಾಗ ಕೇಳಿ ಕೆಲವು ಸ್ನೇಹಿತರು ಸಹಾ ಗೃಹತ್ಯಾಗ ಮಾಡಿ ಇವರೊಂದಿಗೆ ಕೂಡಿಕೊಂಡರು. ಆಗ ಆ ಸಮಯದಲ್ಲಿ ಜ್ಞಾನಿಯು ಹಾಗು ವಾಗ್ಮಿಯು ಆಗಿದ್ದಂತಹ ಸಂಜಯ ಸನ್ಯಾಸಿಯ ಬಳಿ ಶಿಷ್ಯರಾದರು. ಆದರೂ ಅವರಿಗೆ ಏನೋ ಕೊರತೆ ಕಾಡತೊಡಗಿತು. ಯೋಗ್ಯ ಗುರುವು ಸಿಗದ ಕಾರಣ, ಸಂಜಯನಲ್ಲಿಯೇ ಶಿಷ್ಯರಾಗಿದ್ದರು.
                ಕೆಲವು ವರ್ಷಗಳ ನಂತರ ಬೋಧಿಸತ್ತರು ಗೃಹತ್ಯಾಗ ಮಾಡಿ ನಂತರ ಬುದ್ಧರಾದ ಮೇಲೆ ಅವರ ಪಂಚವಗರ್ಿಯ ಶಿಷ್ಯರಲ್ಲಿ ಒಬ್ಬರಾದ ಅಸ್ಸಜಿಯನ್ನು ಸಾರಿಪುತ್ತರು ಕಂಡರು. ಅಸ್ಸಜಿಯಲ್ಲಿನ ಇಂದ್ರಿಯಗಳ ನಿವರ್ಿಕಾರತೆ, ಶಾಂತತೆ, ಏಕಾಗ್ರತೆ, ಆನಂದ, ಅಂಟದಿರುವಿಕೆ, ಅಕ್ಷೊಭ್ಯತೆ, ತೇಜಸ್ಸು ಸಾರಿಪುತ್ತರಿಗೆ ಆಕಷರ್ಿಸಿದವು. ಖಂಡಿತವಾಗಿಯೂ ಈತನು ಸತ್ಯ ಕಂಡಿರುವನು ಎಂದು ದೃಢೀಕರಿಸಿಕೊಂಡು, ಧಮ್ಮ ಬೋಧಿಸುವಂತೆ ಅಸ್ಸಜಿಯನ್ನು ಕೇಳಿಕೊಂಡರು. ಆದರೆ ಅಸ್ಸಜಿಯು ತಾನಿನ್ನೂ ಹೊಸಬ, ಬುದ್ಧರಷ್ಟು ಚೆನ್ನಾಗಿ ವಿವರಿಸಲಾರೆ ಎಂದಾಗ, ತಾವು ತಿಳಿದಿರುವಷ್ಟೇ ತಿಳಿಸಿ, ಧನ್ಯನಾಗುವೆ ಎಂದು ಸಾರಿಪುತ್ರ ತಿಳಿಸಿದಾಗ, ಅಸ್ಸಜಿಯು ಈ ಗಾಥೆ ನುಡಿಯುತ್ತಾರೆ.
                ಯಾವೆಲ್ಲಾ ಧಮ್ಮಗಳು ವಿಷಯಗಳು ಕಾರಣಗಳಿಂದ ಉದಯಿಸುತ್ತವೆಯೋ,
ಆ ಕಾರಣಗಳೆಲ್ಲವನ್ನು ತಥಾಗತರು ತಿಳಿಸಿಹರು,
ಹಾಗೆಯೇ ಅವೆಲ್ಲದರ ನಿರೊಧವನ್ನು ತಿಳಿಸಿದ್ದಾರೆ
ಮಹಾಸಮಣರಾದ ಬುದ್ಧ ಭಗವಾನರು.
                ಮೇಲಿನ ಎರಡು ವಾಕ್ಯಗಳನ್ನು ಕೇಳುತ್ತಿದ್ದಂತೆಯೇ, ಅವುಗಳ ಸಾರವನ್ನೆಲ್ಲಾ ತಕ್ಷಣ ಗ್ರಹಿಸಿದ ಸಾರಿಪುತ್ರ ಆ ಕ್ಷಣದಲ್ಲೇ ಸೋತಪನ್ನರಾದರು. ನಂತರ ಕೋಲಿತನನ್ನು ಭೇಟಿಮಾಡಿ ಆತನಿಗೆ ಈ ಗಾಥೆ ತಿಳಿಸಿದ ನಂತರದಲ್ಲೇ ಮೊಗ್ಗಲ್ಲಾನರವರು ಸಹಾ ಸೋತಪನ್ನರಾದರು.
                ನಂತರ ಇಬ್ಬರೂ ಬುದ್ಧ ಭಗವಾನರ ಶಿಷ್ಯರಾಗಲು ನಿರ್ಧರಿಸಿದರು. ತಮ್ಮ ಹಿಂದಿನ ಗುರುವಾದ ಸಂಜಯನಿಗೂ, ತಮ್ಮೊಂದಿಗೆ ಬರಲು ಒತ್ತಾಯಿಸಿದರು. ಆದರೆ ಅತನು ಒಪ್ಪದಿದ್ದಾಗ, ಅವರಿಬ್ಬರೇ ಬುದ್ಧರ ಬಳಿಗೆ ಹೋಗಲು ನಿರ್ಧರಿಸಿದಾಗ ಆಗ ಸಂಜಯನ ಅರ್ಧದಷ್ಟು ಶಿಷ್ಯರು ಇವರನ್ನು ಹಿಂಬಾಲಿಸಿದರು. ಎಲ್ಲರೂ ಸೇರಿ ರಾಜಗೃಹದ ವೇಳುವನಕ್ಕೆ ಬಂದರು. ಬನ್ನಿ ಭಿಕ್ಷುಗಳೇ ಎಂದು ಭಗವಾನರು ಅವರನ್ನು ಆಹ್ವಾನಿಸಿದರು. ಅವರು ಬೌದ್ಧ ಭಿಕ್ಷುಗಳಾದರು. ನಂತರ ಭಗವಾನರ ಬೋಧನೆಯಿಂದ ಸಾರಿಪುತ್ರರು ಅಂದೇ ಅರಹಂತರಾದರು. ಆದರೆ ಮೊಗ್ಗಲ್ಲಾನ ಎರಡು ವಾರದ ನಂತರ ಅರಹಂತರಾದರು. ಅಂದಿನಿಂದ ಅವರ ಹೆಸರು ಸಾರಿಪುತ್ತ ಮತ್ತು ಮೊಗ್ಗಲ್ಲಾನ ಎಂದೇ ಪ್ರಸಿದ್ಧಿಯಾಯಿತು.
                ಸಾರಿಪುತ್ತರು, ಬುದ್ಧರ ನಂತರ ಪ್ರಜ್ಞಾ ವಿಸ್ತಾರತೆಯಲ್ಲಿ ಅವರೇ ಎರಡನೆಯವರು. ಹಾಗೆಯೇ ಮೊಗ್ಗಲ್ಲಾನರವರು ಬುದ್ಧರ ನಂತರ ಅತೀಂದ್ರಿಯ ಶಕ್ತಿಯಲ್ಲಿ ಎರಡನೆಯವರು. ಹೀಗಾಗಿ ಇವರೀರ್ವರು ಇಡೀ ಸಂಘಕ್ಕೆ ಅಗ್ರ ಶ್ರಾವಕರಾಗಿದ್ದರು.
                ಇವರೀರ್ವರ ಬಗ್ಗೆ ಭಗವಾನರು ಸಹಾ ಹೀಗೆ ಪ್ರಶಂಸಿಸಿ, ಆದರ್ಶತೆಯ ಬಗ್ಗೆ ಹೊಗಳಿದ್ದಾರೆ:
                ಓ ಭಿಕ್ಷುಗಳೇ, ಸಾರಿಪುತ್ರ ಮತ್ತು ಮೊಗ್ಗಲ್ಲಾನರೊಂದಿಗೆ ಬೆರೆಯಿರಿ, ಅಂತಹವರ ಜೊತೆಯಲ್ಲಿಯೇ ಆನಂದಿಸಿ, ಅವರು ಪರಮಪ್ರಜ್ಞರಾದ ಭಿಕ್ಖುಗಳಾಗಿದ್ದಾರೆ ಮತ್ತು ಸಹ ಭಿಕ್ಷುಗಳ ಕಲ್ಯಾಣಕಾರರಾಗಿದ್ದಾರೆ.
                ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಶ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು. ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
                ನಂತರ ಅವರು ಅಲೆದಾಡುವ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು.
                ಆಗ ಮೊಗ್ಗಲ್ಲಾನರು ಕರಿಬಂಡೆಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಎರಡು ತಿಂಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು.
                ಆದರೆ ಯಾವಾಗ ಮೂರನೇ ತಿಂಗಳು ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.
                ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.
                ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?
                ಕರಿಬಂಡೆಯ ಬಳಿ.
                ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.
                ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.
                ತಕ್ಷಣ ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.
                ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತೆಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು.
                ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.
                ಭಿಕ್ಷುಗಳೇ, ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.
                ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.
                ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು.

                ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment