Saturday 25 April 2015

dhammapada/dandavagga/10.6/pythonpeta

ಮೂರ್ಖನಿಗೆ ಪಾಪ ಪರಿಣಾಮದ ಅರಿವಿಲ್ಲ
ಮೂರ್ಖನು ಪಾಪ ಮಾಡುವಾಗ, ಅವುಗಳ ಭೀಕರ ಪರಿಣಾಮ ಅರಿಯುವುದಿಲ್ಲ, ಅಂತಹ ದುಮರ್ೇಧನು (ದಡ್ಡನು) ಬೆಂಕಿಯಿಂದ ಆಹುತಿಯಾಗುವವನ ರೀತಿ ಯಾತನೆಗೆ ಗುರಿಯಾಗುತ್ತಾನೆ.  (136)
ಗಾಥ ಪ್ರಸಂಗ 10:6
ಹೆಬ್ಬಾವು ಆಕೃತಿಯ ಪ್ರೇತದ ಪ್ರಸಂಗ

                ಒಮ್ಮೆ ಪರಮಪೂಜ್ಯ ಮೊಗ್ಗಲ್ಲಾನರವರು, ಪೂಜ್ಯ ಲಕ್ಖಣರೊಂದಿಗೆ ಗೃದ್ಧಕೂಟ ಪರ್ವತದಿಂದ ಇಳಿಯುತ್ತಿದ್ದರು. ಆಗ ಅವರಿಗೆ ತಮ್ಮ ದಿವ್ಯದೃಷ್ಟಿಯಿಂದ 25 ಯೋಜನ ಉದ್ದದ ಹೆಬ್ಬಾವಿನ ಆಕೃತಿಯ ಪ್ರೇತವು ಕಂಡುಬಂದಿತು. ಆ ಹಾವಿನ ಆಕೃತಿಯ ಪ್ರೇತಕ್ಕೆ ಎಲ್ಲಾಕಡೆಗಳಿಂದ ಬೆಂಕಿಯು ಆವೃತವಾಗಿ ಅದು ಅತಿ ಯಾತನೆ ಅನುಭವಿಸುತ್ತಿತ್ತು. ಅದರ ಅವಸ್ಥೆಯನ್ನು ಕಂಡಂತಹ ಮೊಗ್ಗಲ್ಲಾನರವರು ವಿಷಾದದ ನಗೆ ಬೀರಿದರು. ಆಗ ಲಕ್ಖಣರವರು ಆ ವಿಷಾದದ ನಗೆಗೆ ಕಾರಣ ಕೇಲಿದರು. ಆಗ ಮೊಗ್ಗಲ್ಲಾನರು ಹಿಗೆ ಪ್ರತಿಕ್ರಿಯಿಸಿದರು: ಸೋದರ, ಈ ಪ್ರಶ್ನೆಗೆ ಉತ್ತರಿಸಲು ಇದು ಸಕಾಲವಲ್ಲ, ಬುದ್ಧರನ್ನು ಭೇಟಿಯಾಗುವವರೆಗೂ ಸುಮ್ಮನಿದ್ದು ನಂತರ ಪ್ರಶ್ನಿಸುವವನಾಗು.
                ನಂತರ ಅವರು ಬುದ್ಧರನ್ನು ಭೇಟಿ ಮಾಡಿದರು. ಆಗ ಪುನಃ ಲಕ್ಖನರವರು ವಿಷಾಧದ ನಗೆಗೆ ಕಾರಣ ಕೇಳಿದರು. ಆಗ ಮೊಗ್ಗಲ್ಲಾನರವರು ಹೀಗೆ ನುಡಿದರು: ಸೋದರನೇ, ಆ ಸ್ಥಳದಲ್ಲಿ ನಾನು ಪ್ರೇತವೊಂದನ್ನು ಕಂಡೆನು, ಅದರ ಸ್ವರೂಪ ಹೀಗಿತ್ತು. ಅಂತಹ ಪ್ರೇತವನ್ನೇ ನಾನು ಕಂಡಿರಲಿಲ್ಲ. ಅದಕ್ಕಾಗಿ ನಾನು ನಗೆ ಬೀರಿದೆನು.
                ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಿಜಕ್ಕೂ ಮೊಗ್ಗಲ್ಲಾನ ಅಂತಹ ಶಕ್ತಿಯನ್ನು ಹೊಂದಿಹನು. ಅವುಗಳ ಸದ್ಭಳಕೆಯನ್ನು ಸಹಾ ಮಾಡಲು ಬಲ್ಲನು. ಭಿಕ್ಷುಗಳೇ, ಮೊಗ್ಗಲ್ಲಾನನಷ್ಟೇ ಅಲ್ಲ, ನಾನು ಸಹಾ ಆ ಪ್ರೇತವನ್ನು ಕಂಡಿರುವೆನು. ಬೋಧಿವೃಕ್ಷದ ವಜ್ರಾಸನದಲ್ಲಿರುವಾಗ, ಈ ಪ್ರೇತವೇ ಅಲ್ಲಿಗೂ ಬಂದಿತ್ತು. ಅಲೌಕಿಕ ವಿಷಯಗಳಲ್ಲಿ ಶ್ರದ್ಧೆಯಿಲ್ಲದವರಲ್ಲಿ ಹೇಳಿದರೆ ನಂಬುವುದಿಲ್ಲ ಎಂದು ಅರಿತು, ನಾನು ಯಾರಲ್ಲಿಯೂ ಹೇಳಿರಲಿಲ್ಲ. ಈಗ ಮೊಗ್ಗಲ್ಲಾನರು ನೋಡಿರುವುದರಿಂದಾಗಿ ನಾನು ಸಕಾಲವೆಂದು ನಾನು ನುಡಿಯುತ್ತಿರುವೆ.

                ಆಗ ಭಿಕ್ಷುಗಳು ಆ ಪ್ರೇತದ ದುಃಸ್ಥಿತಿಗೆ ಕಾರಣ ವಿವರಿಸುವಂತೆ ಕೇಳಿಕೊಂಡರು. ಆಗ ಭಗವಾನರು ಆ ಪ್ರೇತದ ಪೂರ್ವಜನ್ಮದ ವೃತ್ತಾಂತ ತಿಳಿಸಿದರು. ಹಿಂದೆ ಕಸ್ಸಪ ಬುದ್ಧರ ಕಾಲದಲ್ಲಿ ಸುಮಂಗಲನೆಂಬ ಕೋಶಾಧ್ಯಕ್ಷನಿದ್ದನು. ಆತನು ಪರಮ ದಾನಿಯಾಗಿದ್ದನು. ಆತನು 20 ಉಸಭಗಳಷ್ಟು ವಿಶಾಲ ಸ್ಥಳದಲ್ಲಿ ಚಿನ್ನದ ಇಟ್ಟಿಗೆಗಳಿಂದಲೇ ನೆಲೆ ಹಾಸಿದನು. ಅಷ್ಟೇ ಮೊತ್ತದ ಮೌಲ್ಯದಷ್ಟು ವಿಹಾರವನ್ನು ನಿಮರ್ಿಸಿದನು. ಅಷ್ಟೇ ಮೌಲ್ಯದಷ್ಟು ಹಣ ಖಚರ್ು ಮಾಡಿ ವಿಹಾರದ ಭವ್ಯ ಆರಂಭಣೆ ಮಾಡಿಸಿ ಮಹತ್ ದಾನ ಮಾಡಿದನು. ಒಂದುದಿನ ಆತನು ಬುದ್ಧರಿಗೆ ಪೂಜಿಸಲೆಂದು ದಾರಿಯಲ್ಲಿ ಹೋಗುವಾಗ, ಕಳ್ಳನೊಬ್ಬನು ಕೆಸರಿನಲ್ಲಿದ್ದ ಪಾದಗಳೊಂದಿಗೆ ಹಾಗು ತಲೆಯ ಮೇಲೆ ಬಟ್ಟೆಗಳಿಂದ ಹೊದ್ದು ಅಡಗಿರುವುದನ್ನು ಕಂಡನು. ಆದರೆ ಆತನನ್ನು ಕಂಡು ಬೇಟೆಗಾರನೆಂದು ಭಾವಿಸಿದನು. ಆದರೆ ಕಳ್ಳನು ದ್ವೇಷಾಸೂಯೆಯಿಂದಾಗಿ ಕೋಶಾಧ್ಯಕ್ಷನ ಹೊಲವನ್ನು ಏಳುಬಾರಿ ಸುಟ್ಟುಹಾಕಿದನು. ಅಷ್ಟೇ ಅಲ್ಲ, ಕೋಶಾಧ್ಯಕ್ಷನ ದನಕರುಗಳ ಕಾಲುಗಳನ್ನು ಏಳುಬಾರಿ ಕತ್ತರಿಸಿದನು. ಅಷ್ಟಕ್ಕೂ ತೃಪ್ತನಾಗದೆ, ಕೋಶಾಧ್ಯಕ್ಷನು ಆನಂದಿಸುವುದು ಭಗವಾನರ ಗಂಧಕುಟೀರದಲ್ಲೇ ಎಂದು ತಿಳಿದು ಭಗವಾನರು ಇಲ್ಲದ ವೇಳೆ ಗಮನಿಸಿ ಅದನ್ನು ಸುಟ್ಟು ಹಾಕಿದನು. ಅಲ್ಲಿದ್ದ ಸಾಮಗ್ರಿಗಳನ್ನು ಒಡೆದು ಎಸೆದಿದ್ದನು. ಗಂಧ ಕುಟೀರವು ಸುಟ್ಟು ಭಸ್ಮವಾಗಿತ್ತು. ಈ ಕರ್ಮಫಲದಿಂದಾಗಿ ಆ ಕಳ್ಳನು ಸತ್ತು ಈ ರೀತಿ ಅಗ್ನಿಯ ಜ್ವಾಲೆಗಳಿಂದ ಆವೃತವಾದ ಪ್ರೇತವಾದನು. ಆ ಕೋಶಾಧ್ಯಕ್ಷನು ಆ ಕಳ್ಳನನ್ನು ಕ್ಷಮಿಸಿ, ಪುನ ಗಂಧಕುಟಿಯನ್ನು ನಿಮರ್ಿಸಿದನು. ಆ ಸಮಯದಲ್ಲಿ ಈ ಗಾಥೆಯನ್ನು ಭಗವಾನರು ನುಡಿದಿದ್ದರು.

No comments:

Post a Comment