Wednesday 1 April 2015

dhammapada/sahassavagga/8.6/prayeroffire

ನೂರು ವರ್ಷದ ಅಗ್ನಿಪೂಜೆಗಿಂತ
ಕ್ಷಣಕಾಲದ ಪರಿಶುದ್ಧರ ಪೂಜೆ ಉತ್ತಮ
ಒಬ್ಬರು ಶತವರ್ಷಗಳ ಕಾಲ ವನದಲ್ಲಿ ಅಗ್ನಿ ಪೂಜಿಸುತ್ತ ಪರಿಚಾರಿಕೆ (ರಕ್ಷಿಸುತ್ತಿದ್ದರೂ) ಮಾಡುತ್ತಿದ್ದರೂ, ಆದರೆ ಒಂದು ಕ್ಷಣ ಮುಹೂರ್ತಕಾಲ ಚಿತ್ತಾಭಿವೃದ್ಧಿ ಹೊಂದಿದವರನ್ನು ಪೂಜಿಸಿದರೆ ಅಂತಹ ಗೌರವವು ಶತಮಾನದ ಯಾಗಕ್ಕಿಂತ ಉತ್ತಮವಾದುದು. (107)
ಗಾಥ ಪ್ರಸಂಗ 8:6
ಅಗ್ನಿಪೂಜೆಯು ಪುಣ್ಯಕಾರ್ಯವೇನಲ್ಲ !
                ಒಮ್ಮೆ ಸಾರಿಪುತ್ರರು ತಮ್ಮ ಸೋದರಳಿಯನ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದರು: ಓ ಬ್ರಾಹ್ಮಣ, ನೀನು ಎಂದಾದರೂ ಪುಣ್ಯಕಾರ್ಯ ಮಾಡಿರುವೆಯಾ?
                ಹೌದು ಭಂತೆ, ನಾನು ಪ್ರತಿ ಮಾಸದಲ್ಲೂ ಅಗ್ನಿಯನ್ನು ಪೂಜಿಸಿ, ಪ್ರಾಣಿಯೊಂದನ್ನು ಬಲಿ ನೀಡುತ್ತಿದ್ದೇನೆ.
                ಏತಕ್ಕಾಗಿ ಹೀಗೆ ಮಾಡುತ್ತಿರುವೆ ?
                ಇದೇ ಬ್ರಹ್ಮನ ಬಳಿಗೆ ಹೋಗುವ ಹಾದಿಯೆಂದು ನನ್ನ ಗುರುಗಳು ಹೇಳುತ್ತಿರುವರು.
                ಓ ಬ್ರಾಹ್ಮಣ, ನೀನಾಗಲೀ ಅಥವಾ ನಿನ್ನ ಗುರುಗಳಾಗಲೀ, ಬ್ರಹ್ಮನ ಬಳಿಗೆ ಹೋಗುವ ಮಾರ್ಗ ತಿಳಿದಿಲ್ಲ ಎಂದು ಹೇಳಿ ಆತನನ್ನು ಬುದ್ಧರ ಬಳಿಗೆ ಕರೆತಂದರು.

                ಆಗ ಭಗವಾನರು ಪರಿಶುದ್ಧರಾದ ಅರಹಂತರಿಗೆ ಗೌರವ ಪೂಜೆ ಸಲ್ಲಿಸುವುದು ಶತವರ್ಷದ ಅಗ್ನಿಪೂಜೆಗಿಂತ ಶ್ರೇಯಸ್ಕರ ಎಂದು ತಿಳಿಸಿ, ಈ ಮೇಲಿನ ಗಾಥೆಯನ್ನು ನುಡಿದರು.

 

No comments:

Post a Comment